ನ್ಯೂಯಾರ್ಕ್: ಹಾಲಿವುಡ್ ತಾರೆ ಎಲಿಜಬೆತ್ ಓಲ್ಸೆನ್ ಪ್ರೇಕ್ಷಕರ ಮುಂದೆ ಶೂಟಿಂಗ್ ಮಾಡುವಾಗ ನಿಜವಾಗಿಯೂ ಗೊಂದಲಕ್ಕೊಳಗಾಗುತ್ತೇನೆ ಎಂದು ಹೇಳಿದ್ದಾರೆ. ಪಾಲ್ ಬೆಥನಿ ಅವರೊಂದಿಗೆ ಓಲ್ಸೆನ್ ತಮ್ಮ ವೆಬ್ ಸರಣಿ 'ವಂಡಾವಿಷನ್' ಚಿತ್ರೀಕರಣವನ್ನು ಪ್ರೇಕ್ಷಕರ ಮುಂದೆ ನಡೆಸಿದ್ದರು.
"ಇದು ತುಂಬಾ ಕಷ್ಟವಾಗಿತ್ತು. ಸಾಕಷ್ಟು ತ್ವರಿತ ಬದಲಾವಣೆಗಳು ಕಂಡು ಬಂದವು ಮತ್ತು ಅದು ನನ್ನನ್ನು ಸಂಪೂರ್ಣವಾಗಿ ಗೊಂದಲಗೊಳಿಸಿತು" ಎಂದು ಓಲ್ಸೆನ್ ಅನುಭವವನ್ನು ಹೇಳಿದರು. "ಇದು ನಿಜವಾಗಿಯೂ ನನ್ನ ಮೆದುಳನ್ನು ಗೊಂದಲಕ್ಕೀಡು ಮಾಡಿದೆ. ಪ್ರೇಕ್ಷಕರ ಮುಂದೆ ನಟಿಸುವುದು, ಕ್ಯಾಮರಾವನ್ನು ಎದುರಿಸುವುದು. ಕಷ್ಟವಾಗಿತ್ತು. ನಮ್ಮ ಎರಡನೇ ಸಂಚಿಕೆಯಲ್ಲಿ ಅಂತಿಮ ಹಂತವನ್ನು ಕಾಣುವಾಗ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು.
ಮಾರ್ವೆಲ್ ಸ್ಟುಡಿಯೋಸ್ ಸರಣಿಯು ಓಲ್ಸೆನ್ ಅನ್ನು ವಂಡಾ ಮ್ಯಾಕ್ಸಿಮಾಫ್ ಆಗಿ ಮತ್ತು ಬೆಥನಿಯವರನ್ನು ವಿಷನ್ ಆಗಿ ತೆರ ಮೇಲೆ ತರಲಿದೆ. ಇದರಲ್ಲಿ ಇಬ್ಬರು ಸೂಪರ್ ಹೀರೊಗಳು ವಿವಾಹಿತ ದಂಪತಿಗಳಾಗಿ ತಮ್ಮ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದು ಸರಣಿಯ ಸಾರಾಂಶ.