ಸಿಯಾಟಲ್: ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ಕಳೆದ ವಾರ ಭೂಕುಸಿತ ಸಂಭವಿಸಿತ್ತು. ಈ ವೇಳೆ, ಕುಸಿದು ಬಿದ್ದ ಮನೆಯೊಳಗೆ ಶ್ವಾನವೊಂದು ಸಿಲುಕಿತ್ತು. ಆರು ದಿನಗಳಿಂದ ಸಿಲುಕಿದ್ದ ಶ್ವಾನ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ:
ಕಪ್ಪು ಲ್ಯಾಬ್ರಡಾರ್ ಶ್ವಾನವನ್ನು ರಕ್ಷಿಸಿದ ಬಳಿಕ ‘ನನ್ನ ಮಗು.. ನನ್ನ ಮಗು..’ ಎಂದು ಮನೆಯ ಮಾಲೀಕ ತಬ್ಬಿಕೊಂಡು ಆನಂದಬಾಷ್ಪ ಸುರಿಸಿದರು. ಸಿಯಾಟಲ್ನ ಅಗ್ನಿಶಾಮಕ ಇಲಾಖೆ ಗುರುವಾರ ಟ್ವಿಟರ್‌ನಲ್ಲಿ ಈ ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಪಶುವೈದ್ಯರು ಬದುಕುಳಿದ ಶ್ವಾನದ ಆರೋಗ್ಯ ಪರೀಕ್ಷಿಸಿದರು. ಈ ವೇಳೆ ಮನೆ ಮಾಲೀಕ ಫ್ರಿಟ್ಸ್ ಅವರನ್ನು ನೋಡಿದ ಶ್ವಾನ ಸ್ಯಾಮಿ ತನ್ನ ಬಾಲವನ್ನು ಅಲ್ಲಾಡಿಸಿ ನಾನಿನ್ನೂ ಇದ್ದೇನೆ ಎಂಬುದನ್ನು ತೋರಿಸಿತು. ಬದುಕುಳಿದ ಶ್ವಾನ ಕಂಡು ಮಾಲೀಕರು ಹರ್ಷಚಿತ್ತರಾದರು.