ETV Bharat / international

ಡೆಮಾಕ್ರಟಿಕ್ಸ್​​​ಗಳು​​ ಅಮೆರಿಕ ನಾಶಮಾಡಲು ಬಯಸುತ್ತಾರೆ: ಕಿಂಬರ್ಲಿ ಗಿಲ್ಫಾಯ್ಲ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿ ಕಿಂಬರ್ಲಿ ಗಿಲ್ಫಾಯ್ಲ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಭಾಷಣ ಮಾಡಿದ ಅವರು, ಅಮೆರಿಕದ ಮೊದಲ ತಲೆಮಾರಿನ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾರೆ.

author img

By

Published : Aug 25, 2020, 12:32 PM IST

ಕಿಂಬರ್ಲಿ ಗಿಲ್ಫಾಯ್ಲ್
ಕಿಂಬರ್ಲಿ ಗಿಲ್ಫಾಯ್ಲ್

ವಾಷಿಂಗ್ಟನ್​( ಅಮೆರಿಕ): ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿ ಕಿಂಬರ್ಲಿ ಗಿಲ್ಫಾಯ್ಲ್ ತನ್ನನ್ನು ಅಮೆರಿಕದ ಮೊದಲ ತಲೆಮಾರಿನ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾರೆ.

ತನ್ನ ತಾಯ್ನಾಡು ಪೋರ್ಟೊ ರಿಕನ್ ಮತ್ತು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿದ್ದಾರೆ. ಪೋರ್ಟೊ ರಿಕೊ ಯುಎಸ್​ನ ಒಂದು ಪ್ರದೇಶ. ಅಲ್ಲಿರುವ ಜನರು ಅಮೆರಿಕದ ಪ್ರಜೆಗಳಾಗಿದ್ದಾರೆ. ಇನ್ನು ಒಂದು ರಾಷ್ಟ್ರಕ್ಕೆ ಸಮಾಜವಾದಿ ಕಾರ್ಯಸೂಚಿ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಿರುವ ಅವರು, ಡೆಮಾಕ್ರಟಿಕ್ಸ್​ ಪಕ್ಷದವರು ಅಮೆರಿಕವನ್ನ ನಾಶ ಮಾಡಲು ಬಯಸುತ್ತಾರೆ ಎಂದು ಭಾಷಣದಲ್ಲಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆ ಡೇಟಿಂಗ್ ಮಾಡುತ್ತಿರುವ ಕಿಂಬರ್ಲಿ ಗಿಲ್ಫಾಯ್ಲ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಲು ಡೊನಾಲ್ಡ್​​ ಟ್ರಂಪ್​​ ಅಣಿಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ಸ್ ಪಕ್ಷದ ಬಿಡೆನ್​ ಅವರನ್ನ ಸೋಲಿಸಲು ರಣತಂತ್ರ ಹೆಣೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.