ನವದೆಹಲಿ : ಪ್ರಯಾಣಿಕರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ದೆಹಲಿಯಿಂದ ಹೊರಟ ಯುನೈಟೆಡ್ ಏರ್ಲೈನ್ಸ್ ವಿಮಾನವನ್ನು ಲಂಡನ್ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ದೆಹಲಿಯಿಂದ-ಅಮೆರಿಕ ನಡುವೆ ಸಂಚರಿಸಬೇಕಾಗಿದ್ದ ವಿಮಾನದ ಪ್ರಯಾಣಿಕರೊಬ್ಬರ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಲಂಡನ್ ಹೀಥ್ರೂ ವಿಮಾನ ನಿಲ್ದಾಣದ ಕಡೆ ತಿರುಗಿಸಲಾಗಿಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಯುನೈಟೆಡ್ ಏರ್ಲೈನ್ಸ್ ಅಧಿಕಾರಿಗಳು, ನಮ್ಮ ತಂಡವು ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆಗಳನ್ನು ಒದಗಿಸಲಿದೆ. ಪ್ರಯಾಣಿಕರಿಗೆ ಅವರ ಪ್ರಯಾಣ ಮುಂದುವರೆಸಲು ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.