ನ್ಯೂಯಾರ್ಕ್: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್ ಮಹಾನಗರದಲ್ಲಿ ಔಷಧಿಗಳ ಕೊರತೆ ಎದುರಾಗಬಹುದಾದ ಭೀತಿ ಆವರಿಸಿದೆ.
'ಇನ್ನು 10 ದಿನಗಳಲ್ಲಿ ನಮ್ಮ ಔಷಧಿ ದಾಸ್ತಾನು ಮುಗಿಯಲಿದೆ. ತಕ್ಷಣ ಮತ್ತಷ್ಟು ವೆಂಟಿಲೇಟರ್ಗಳು ಪೂರೈಕೆಯಾಗದಿದ್ದಲ್ಲಿ ಬಹಳಷ್ಟು ಜನ ಸಾಯಲಿದ್ದಾರೆ' ಎಂದಿದ್ದಾರೆ ನ್ಯೂಯಾರ್ಕ್ ಮೇಯರ್ ಬಿಲ್ ಡೆ ಪ್ಲಾಸಿಯೊ.
ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ನ್ಯೂಯಾರ್ಕ್ ಪ್ರದೇಶದಲ್ಲೇ ವರದಿಯಾಗಿವೆ. ಕೊರೊನಾದಿಂದ ಸಂಭವಿಸಿದ ಸಾವುಗಳಲ್ಲಿ ಅರ್ಧದಷ್ಟು ಸಾವುಗಳು ಇಲ್ಲಿಯೇ ಸಂಭವಿಸಿವೆ. ಅಮೆರಿಕದಲ್ಲಿ ಸುಮಾರು 31 ಸಾವಿರ ಜನರಿಗೆ ಸೋಂಕು ದೃಢಪಟ್ಟಿದ್ದು, 390 ಜನ ಸಾವಿಗೀಡಾಗಿದ್ದಾರೆ. ಈಗ ನ್ಯೂಯಾರ್ಕ್ ನಗರಕ್ಕೆ ಔಷಧಿ ಹಾಗೂ ಇತರ ವೈದ್ಯಕೀಯ ಉಪಕರಣಗಳ ಕೊರತೆಯಿಂದ ಕೊರೊನಾ ವಿರುದ್ಧದ ಹೋರಾಟ ಕಷ್ಟಕರವಾಗುತ್ತಿದೆ.