ನ್ಯೂಯಾರ್ಕ್: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎನ್‌ಜಿ–14 ಸಿಗ್ನಸ್ ಎಂಬ ಬಾಹ್ಯಾಕಾಶ ನೌಕೆಗೆ ಭಾರತೀಯ ಮೂಲದ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಟ್ಟಿದ್ದು, ಶುಕ್ರವಾರ ರಾತ್ರಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.
ಕಲ್ಪನಾ ಚಾವ್ಲಾ ಅವರ ಹೆಸರಿನಿಂದ ಸಿಗ್ನಸ್ ಬಾಹ್ಯಾಕಾಶ ನೌಕೆಗೆ ಹೆಸರಿಟ್ಟ ವಿಷಯವನ್ನು ನಾಸಾ ಟ್ವಿಟರ್ ಮೂಲಕ ಬಹಿರಂಗಪಡಿಸಿದೆ. ಎಸ್‌ಎಸ್ ಕಲ್ಪನಾ ಚಾವ್ಲಾ ಎಂದು ಕರೆಯಲ್ಪಡುವ ಸಿಗ್ನಸ್ ಬಾಹ್ಯಾಕಾಶ ನೌಕೆ ಶುಕ್ರವಾರ ರಾತ್ರಿ ಬಾಹ್ಯಾಕಾಶಕ್ಕೆ ಹಾರಿದೆ.
-
3.. 2.. 1.. liftoff. 🚀@NorthropGrumman's Antares rocket & Cygnus spacecraft launch from @NASA_Wallops. This Cygnus, named the S.S. Kalpana Chawla, will deliver ~8,000 pounds of @ISS_Research and supplies to @Space_Station. pic.twitter.com/W1WIOd5KIA
— NASA (@NASA) October 3, 2020 " class="align-text-top noRightClick twitterSection" data="
">3.. 2.. 1.. liftoff. 🚀@NorthropGrumman's Antares rocket & Cygnus spacecraft launch from @NASA_Wallops. This Cygnus, named the S.S. Kalpana Chawla, will deliver ~8,000 pounds of @ISS_Research and supplies to @Space_Station. pic.twitter.com/W1WIOd5KIA
— NASA (@NASA) October 3, 20203.. 2.. 1.. liftoff. 🚀@NorthropGrumman's Antares rocket & Cygnus spacecraft launch from @NASA_Wallops. This Cygnus, named the S.S. Kalpana Chawla, will deliver ~8,000 pounds of @ISS_Research and supplies to @Space_Station. pic.twitter.com/W1WIOd5KIA
— NASA (@NASA) October 3, 2020
ಎಸ್‌ಎಸ್ ಕಲ್ಪನಾ ಚಾವ್ಲಾ ಎಂದು ಕರೆಯಲ್ಪಡುವ ಸಿಗ್ನಸ್ ಬಾಹ್ಯಾಕಾಶ ನೌಕೆಯನ್ನು ನಾಸಾ ವಾಣಿಜ್ಯ ಸರಕು ಪೂರೈಕೆದಾರ ನಾರ್ತ್ರೋಪ್ ಗ್ರಮ್ಮನ್‌ರ 14ನೇ ರೀಸಪ್ಲೆ ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸೇರಿಸಿದೆ.
ಕಲ್ಪನಾ ಚಾವ್ಲಾ, ನಾಸಾ ಉಡಾವಣೆ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದರು. 2003ರಲ್ಲಿ ಈ ಗಗನನೌಕೆ ಭೂಮಿಗೆ ಮರಳುವಾಗ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಕಲ್ಪನಾ ಚಾವ್ಲಾ ಸೇರಿದಂತೆ ಇತರೆ ಏಳು ಗಗನಯಾತ್ರಿಗಳು ಸಾವನ್ನಪ್ಪಿದ್ದರು.