ETV Bharat / international

ಲೈಂಗಿಕ ಕಿರುಕುಳ ಆರೋಪ ಸಾಬೀತು: ಗವರ್ನರ್​ ಕ್ಯುಮೊ ರಾಜೀನಾಮೆಗೆ ಬೈಡನ್​ ಒತ್ತಾಯ - ಆಂಡ್ರ್ಯೂ ಕ್ಯುಮೊ ಕೇಸ್​

ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಫೆಡರಲ್ ಮತ್ತು ರಾಜ್ಯ ಕಾನೂನುಗಳನ್ನು ಉಲ್ಲಂಘಿಸಿ ಹಾಲಿ ಮತ್ತು ಮಾಜಿ ರಾಜ್ಯ ಉದ್ಯೋಗಿಗಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರು ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಮೆರಿಕ​ ಅಧ್ಯಕ್ಷ ಜೋ ಬೈಡನ್​ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.

Andrew Cuomo
ಆಂಡ್ರ್ಯೂ ಕ್ಯುಮೊ
author img

By

Published : Aug 4, 2021, 11:44 AM IST

ನ್ಯೂಯಾರ್ಕ್: ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಾಬೀತಾದ ಬೆನ್ನಲ್ಲೇ ಯುಎಸ್​ ಅಧ್ಯಕ್ಷ ಜೋ ಬೈಡನ್​ ಸೇರಿದಂತೆ ಅನೇಕ ಸಂಸತ್​ ಸದಸ್ಯರು ಕ್ಯುಮೋ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸುಮಾರು 11 ಮಹಿಳೆಯರಿಗೆ ಕ್ಯುಮೊ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇತ್ತೀಚೆಗೆ ಸಾಬೀತಾಗಿತ್ತು.

ಈ ಬಗ್ಗೆ ಮಾತನಾಡಿರುವ ಬೈಡನ್​ ಕ್ಯುಮೋ ರಾಜೀನಾಮೆ ನೀಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಹೌಸ್ ಸ್ಪೀಕರ್ ನ್ಯಾನ್ಸಿ ಫೆಲೋಸಿ ಮತ್ತು ನ್ಯೂಯಾರ್ಕ್‌ನ ಯುಎಸ್ ಸೆನೆಟರ್‌ಗಳಾದ ಚಕ್ ಶುಮರ್ ಮತ್ತು ಕರ್ಸ್ಟನ್ ಗಿಲ್ಲಿ ಬ್ರಾಂಡ್ ಸಹ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಆದರೆ ಕ್ಯುಮೋ ಈ ಒತ್ತಾಯವನ್ನು ಧಿಕ್ಕರಿಸಿದ್ದು, "ಸತ್ಯಗಳು ತುಂಬಾ ಭಿನ್ನವಾಗಿವೆ. ನಾನು ಯಾರನ್ನೂ ಅನುಚಿತವಾಗಿ ಮುಟ್ಟಲಿಲ್ಲ. ಹೀಗಾಗಿ ನನ್ನ ಮೇಲಿನ ಆರೋಪಗಳು ಸುಳ್ಳು. ಅಷ್ಟೇ ಅಲ್ಲದೆ, ಕಚೇರಿಯಿಂದ ಹೊರಹೋಗುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ತನಿಖೆ ಬಗ್ಗೆ ಮಾತನಾಡಿದ್ದು, "ಈ ವಿಚಾರಣೆಗಳು ಮತ್ತು ಸಾಕ್ಷ್ಯಗಳ ತುಣುಕುಗಳು ಆಳವಾದ ಗೊಂದಲವನ್ನು ಸೃಷ್ಟಿಸುತ್ತಿವೆ. ಗವರ್ನರ್ ಕ್ಯುಮೋ, ಫೆಡರಲ್ ಮತ್ತು ರಾಜ್ಯ ಕಾನೂನುಗಳನ್ನು ಉಲ್ಲಂಘಿಸಿ ಹಾಲಿ ಮತ್ತು ಮಾಜಿ ರಾಜ್ಯ ಉದ್ಯೋಗಿಗಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದೆ" ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.