ವಾಷಿಂಗ್ಟನ್: ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ ಒಂದು ಲಕ್ಷ ಸಮೀಪಿಸುತ್ತಿದೆ. ಈವರೆಗೆ ಜಗತ್ತಿನಾದ್ಯಂತ 95,735 ಜನ ಮಾರಕ ಸೋಂಕಿಗೆ ಬಲಿಯಾಗಿದ್ದು, 16 ಲಕ್ಷ ಜನ ಸೋಂಕಿಗೊಳಗಾಗಿದ್ದಾರೆ.
ವಿಶ್ವದಲ್ಲಿ ಈವರೆಗೆ ಒಟ್ಟು 95,736 ಕೊರೊನಾಗೆ ಬಲಿಯಾಗಿದ್ದು, 16,04,736ಕ್ಕೂ ಹೆಚ್ಚು ಜನ ಸೋಂಕಿಗೊಳಗಾಗಿದ್ದಾರೆ. ಇದರಲ್ಲಿ 3,56,660 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಅಮೆರಿಕದಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಇಲ್ಲಿ ನಿನ್ನೆ ಒಂದೇ ದಿನ 1,700ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದ ಒಟ್ಟು ಸಾವಿನ ಸಂಖ್ಯೆ 16,697ಕ್ಕೇರಿದ್ದು, ಇಟಲಿ ನಂತರ ಹೆಚ್ಚು ಜನ ಸಾವನ್ನಪ್ಪಿದ ರಾಷ್ಟ್ರ ಅಮೆರಿಕವಾಗಿದೆ. ಅಲ್ಲದೆ 4,68,887 ಜನರನ್ನು ಸೋಂಕು ಬಾಧಿಸಿದೆ.
ಸ್ಪೇನ್ನಲ್ಲೂ ಕೊರೊನಾ ಸಾವು-ನೋವು ಹೆಚ್ಚುತ್ತಿದ್ದು, ಈವರೆಗೆ ದೇಶದಲ್ಲಿ 15,447 ಜನ ಸಾವನ್ನಪ್ಪಿದ್ದರೆ, 1,53,222 ಸೋಂಕಿಗೊಳಗಾಗಿದ್ದಾರೆ. ಇಟಲಿಯಲ್ಲಿ 18,279 ಜನ ಸಾವನ್ನಪ್ಪಿದ್ದರೆ, 143,626 ಜನ ಸೋಂಕಿನಿಂದ ಬಳಲುತ್ತಿದ್ದಾರೆ.
ಅತ್ತ ಫ್ರಾನ್ಸ್ನಲ್ಲಿ 12,210, ಬ್ರಿಟನ್ 7,978, ಇರಾನ್ 4,110 ಹಾಗೂ ಚೀನಾದಲ್ಲಿ 3,336 ಜನ ಸಾವನ್ನಪ್ಪಿದ್ದಾರೆ.