ETV Bharat / international

UN ಶಾಂತಿಪಾಲಕರಿಗೆ 2 ಲಕ್ಷ ಕೊರೊನಾ ಲಸಿಕೆ ಗಿಫ್ಟ್​: ಭಾರತೀಯರಿಗೆ ಧನ್ಯವಾದ ಅರ್ಪಿಸಿದ ವಿಶ್ವಸಂಸ್ಥೆ

author img

By

Published : Mar 27, 2021, 1:30 PM IST

ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ 2 ಲಕ್ಷ ಕೋವಿಡ್​ -19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆಗಳು. ಈ ದೇಣಿಗೆಯಿಂದಾಗಿ ಬ್ಲೂ ಹೆಲ್ಮೆಟ್‌ದಾರರು (ಶಾಂತಿ ಪಾಲನ ಸೈನಿಕರು) ತಮ್ಮ ಜೀವ ಉಳಿಸುವ ಕಾರ್ಯವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಶಾಂತಿ ಪಾಲನಾ ಪಡೆಯ ಉನ್ನತ ಅಧಿಕಾರಿಗಳು ಸೇರಿದಂತೆ ಯುಎನ್​ ಮುಖ್ಯಸ್ಥರು ಹೇಳಿದ್ದಾರೆ.

UN
UN

ನ್ಯೂಯಾರ್ಕ್​: ಜಾಗತಿಕ ಲಸಿಕೆ ಮೈತ್ರಿ ಪರೋಪಕಾರದ ಭಾಗವಾಗಿ ಭಾರತ ಸರ್ಕಾರ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ 2 ಲಕ್ಷ ಕೋವಿಡ್ ಡೋಸ್​ ಉಡುಗೊರೆ ನೀಡಿದ್ದನ್ನು ಯುಎನ್​​ ಶಾಂತಿಪಾಲನ ಮುಖ್ಯಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ 2,00,000 ಕೋವಿಡ್​-19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆಗಳು. ಈ ದೇಣಿಗೆಯಿಂದಾಗಿ ಬ್ಲೂ ಹೆಲ್ಮೆಟ್‌ದಾರರು (ಶಾಂತಿ ಪಾಲನ ಸೈನಿಕರು) ತಮ್ಮ ಜೀವ ಉಳಿಸುವ ಕಾರ್ಯವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಶಾಂತಿ ಪಾಲನಾ ಪಡೆಯ ಉನ್ನತ ಅಧಿಕಾರಿಗಳು ಸೇರಿದಂತೆ ಯುಎನ್​ ಮುಖ್ಯಸ್ಥರು ಹೇಳಿದ್ದಾರೆ.

ಯುಎನ್ ಶಾಂತಿಪಾಲಕರಿಗೆ ಭಾರತವು ಉಡುಗೊರೆಯಾಗಿ ಘೋಷಿಸಿದ 2 ಲಕ್ಷ ಡೋಸ್ ಕೋವಿಡ್​-19 ಲಸಿಕೆಗಳು ಶನಿವಾರ ಮುಂಜಾನೆ ಮುಂಬೈಯಿಂದ ಹೊರಟು ಡೆನ್ಮಾರ್ಕ್​ನ ಕೋಪನ್ ಹೇಗನ್ ತಲುಪಲಿವೆ. ನಂತರ ಅವುಗಳನ್ನು ವಿಶ್ವಸಂಸ್ಥೆ ಎಲ್ಲಾ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ವಿತರಿಸುತ್ತದೆ.

ಶಾಂತಿ ಕಾರ್ಯಾಚರಣೆಗಳ ಸೆಕ್ರೆಟರಿ ಜನರಲ್ ಜೀನ್-ಪಿಯರ್ ಲ್ಯಾಕ್ರೊಯಿಕ್ಸ್ ಮತ್ತು ಕಾರ್ಯಾಚರಣಾ ಬೆಂಬಲದ ಸೆಕ್ರೆಟರಿ ಜನರಲ್ ಅತುಲ್ ಖರೆ ಅವರು ಯುಎನ್ ಶಾಂತಿಪಾಲಕರಿಗೆ ಭಾರತ ನೀಡಿದ ಲಸಿಕೆ ಪ್ರಮಾಣದ ಕೊಡುಗೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ: ಜಾಗತಿಕ ಹವಾಮಾನ ಶೃಂಗಸಭೆ; ಮೋದಿಗೆ ಯುಎಸ್​ ಅಧ್ಯಕ್ಷ ಬೈಡನ್ ಆಹ್ವಾನ

ನಮ್ಮ ಸಿಬ್ಬಂದಿ ಮತ್ತು ಅವರ ನಿರ್ಣಾಯಕ ಕೆಲಸವನ್ನು ಮುಂದುವರೆಸುವ ಸಾಮರ್ಥ್ಯ, ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಅವರ ಆದೇಶಗಳನ್ನು ತಲುಪಿಸಲು ನೆರವಾಗುವ ಸಲುವಾಗಿ ಎಲ್ಲಾ ಶಾಂತಿಪಾಲಕರಿಗೆ ಕೋವಿಡ್​-19 ಲಸಿಕೆ ಪರಿಣಾಮಕಾರಿಯಾಗಿ ನೀಡುವುದು ವಿಶ್ವಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಲ್ಯಾಕ್ರೊಯಿಕ್ಸ್ ಹೇಳಿದರು.

ಭಾರತವು ಶಾಂತಿಪಾಲನೆಯ ದೀರ್ಘಕಾಲದ ಮತ್ತು ಅಚಲ ಬೆಂಬಲಿಗರಾಗಿ ನಿಂತಿದೆ. ನಮ್ಮ ಶಾಂತಿಪಾಲನಾ ಸಿಬ್ಬಂದಿಗೆ ಅನುಕೂಲವಾಗುವಂತೆ ಮತ್ತು ತಮ್ಮ ಜೀವ ಉಳಿಸುವ ಕೆಲಸವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸಲು ಅನುವು ಮಾಡಿಕೊಡುವಂತೆ ಕೋವಿಡ್​-19 ಲಸಿಕೆಗಳನ್ನು ಉದಾರವಾಗಿ ದಾನ ಮಾಡಿದ ಸರ್ಕಾರ ಮತ್ತು ಭಾರತದ ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಯುಎನ್ ಶಾಂತಿಪಾಲಕರಿಗೆ ಭಾರತ 2 ಲಕ್ಷ ಕೋವಿಡ್​ -19 ಲಸಿಕೆ ಉಡುಗೊರೆಯಾಗಿ ನೀಡಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಫೆಬ್ರವರಿಯಲ್ಲಿ ಘೋಷಿಸಿದ್ದರು.

ಇಂತಹ ಕಷ್ಟದ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಯುಎನ್ ಶಾಂತಿಪಾಲಕರನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ 2 ಲಕ್ಷ ಡೋಸ್ ಉಡುಗೊರೆ ನೀಡಲು ನಾವು ಬಯಸುತ್ತೇವೆ ಎಂದು ಜೈಶಂಕರ್ ಯುಎನ್ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಹೇಳಿದ್ದರು.

ಯುಎನ್ ಶಾಂತಿಪಾಲನಾ ಪಡೆಯಲ್ಲಿ 2021ರ ಜನವರಿ 31ರ ವೇಳೆಗೆ, ಶಾಂತಿ ಕಾರ್ಯಾಚರಣೆ ಇಲಾಖೆಯ ನೇತೃತ್ವದಲ್ಲಿ ವಿಶ್ವದಾದ್ಯಂತ 12 ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಒಟ್ಟು 85,782 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.