ವಾಷಿಂಗ್ಟನ್ : ಮಹಾಮಾರಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 50 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕು ತಡೆಗಟ್ಟಲು ಕೈಗೊಂಡ ಹಲವು ಕ್ರಮಗಳ ಹೊರತಾಗಿಯೂ ಎರಡೇ ವರ್ಷದಲ್ಲಿ ಅರ್ಧ ಕೋಟಿ ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಅಮೆರಿಕ, ಯುರೋಪಿಯನ್ ಒಕ್ಕೂಟ, ಬ್ರಿಟನ್ ಹಾಗೂ ಬ್ರೆಜಿಲ್ ಎಲ್ಲಾ ಉನ್ನತ ಅಥವಾ ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಅಧಿಕ ಸಾವು ಸಂಭವಿಸಿವೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೇ 7,40,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದು ನಮ್ಮ ಜೀವಿತಾವಧಿಯಲ್ಲಿ ನಿರ್ಣಾಯಕ ಕ್ಷಣವಾಗಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿದಾಗ ಮತ್ತೆ 5 ಮಿಲಿಯನ್ ಸಾವಿನ ಸಂಖ್ಯೆಗೆ ಹೋಗುವುದಿಲ್ಲ ಎಂದು ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗ ತಜ್ಞ ಡಾ. ಆಲ್ಬರ್ಟ್ ಕೋ ಹೇಳಿದ್ದಾರೆ.
ಜಗತ್ತಿನಲ್ಲಿ ಕೋವಿಡ್‌ಗೆ ಮೂರನೇ ಸ್ಥಾನ
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಲೆಕ್ಕ ಹಾಕಿದ ಸಾವಿನ ಸಂಖ್ಯೆಯು ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಓಸ್ಲೋದ ಅಂದಾಜಿನ ಪ್ರಕಾರ, ಇದು 1950 ರಿಂದ ರಾಷ್ಟ್ರಗಳ ನಡುವಿನ ಯುದ್ಧಗಳಲ್ಲಿ ಕೊಲ್ಲಲ್ಪಟ್ಟ ಜನರ ಸಂಖ್ಯೆಗೆ ಪ್ರತಿಸ್ಪರ್ಧಿಯಾಗಿದೆ. ಜಾಗತಿಕವಾಗಿ ಕೋವಿಡ್-19 ಈಗ ಹೃದ್ರೋಗ ಮತ್ತು ಪಾರ್ಶ್ವವಾಯು ನಂತರ ಸಾವಿಗೆ ಮೂರನೇ ಪ್ರಮುಖ ಕಾರಣವಾಗಿದೆ.
ಸೀಮಿತ ಪರೀಕ್ಷೆ ಹಾಗೂ ಜನರು ವೈದ್ಯಕೀಯ ಚಿಕಿತ್ಸೆ ಇಲ್ಲದೆ ಮನೆಯಲ್ಲಿ ಸಾಯುತ್ತಿರುವ ಕಾರಣ ವಿಶೇಷವಾಗಿ ಭಾರತ ಸೇರಿದಂತೆ ವಿಶ್ವದ ಬಡ ರಾಷ್ಟ್ರಗಳಲ್ಲಿ ಅಂಕಿ-ಅಂಶವು ಖಂಡಿತವಾಗಿಯೂ ಕಡಿಮೆ ಇದೆ ಎನ್ನಲಾಗಿದೆ. ಇದೀಗ ವೈರಸ್ ರಷ್ಯಾ, ಉಕ್ರೇನ್ ಮತ್ತು ಪೂರ್ವ ಯುರೋಪಿನ ಇತರ ಭಾಗಗಳಲ್ಲಿ ತಲ್ಲಣ ಮೂಡಿಸುತ್ತಿದೆ. ವಿಶೇಷವಾಗಿ ವದಂತಿಗಳು, ತಪ್ಪು ಮಾಹಿತಿ ಮತ್ತು ಸರ್ಕಾರದ ಮೇಲಿನ ಅಪನಂಬಿಕೆಯು ವ್ಯಾಕ್ಸಿನೇಷನ್ ಪ್ರಯತ್ನಗಳು ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ. ಉಕ್ರೇನ್‌ನಲ್ಲಿ ವಯಸ್ಕ ಜನಸಂಖ್ಯೆಯ ಕೇವಲ ಶೇ.17 ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಆದರೆ, ಅರ್ಮೇನಿಯಾದಲ್ಲಿ ಇದು ಕೇವಲ 7 ರಷ್ಟಿದೆ.
ಭಾರತದ ಅಂಕಿ ಅಂಶಗಳ ಮೇಲೆ ಅನುಮಾನ?
ಭಾರತದಲ್ಲೇ ಮೊದಲು ಕಾಣಿಸಿಕೊಂಡಿದ್ದು ಎನ್ನಲಾದ ಡೆಲ್ಟಾ ಉಲ್ಬಣವು ಮೇ ಆರಂಭದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದರೂ, ಶ್ರೀಮಂತ ದೇಶಗಳಾದ ರಷ್ಯಾ, ಅಮೆರಿಕ ಅಥವಾ ಬ್ರಿಟನ್‌ಗಿಂತ ಈಗ ವರದಿಯಾದ ದೈನಂದಿನ ಸಾವಿನ ಪ್ರಮಾಣ ಕಡಿಮೆ ಹೊಂದಿದೆ. ಆದರೂ ದೇಶದ ಅಂಕಿ-ಅಂಶಗಳ ಸುತ್ತಲೂ ಅನಿಶ್ಚಿತತೆಯಿದೆ.
ಇದನ್ನೂ ಓದಿ: ಎಲ್ಲಾ ರಾಷ್ಟ್ರಗಳಿಗೆ ಇನ್ನೂ ಸಿಗದ ಲಸಿಕೆ; 2022ರ ವರೆಗೆ COVID ಇರುತ್ತೆ: WHO