ETV Bharat / international

ಡೆಲ್ಟಾ ರೂಪಾಂತರಕ್ಕೆ ಅಮೆರಿಕ ತತ್ತರ: ವ್ಯಾಕ್ಸಿನ್​ ಪಡೆದ ಸೆನೆಟರ್​ಗೂ ಕೋವಿಡ್ ದೃಢ - ಆಂಥೋನಿ ಫೌಸಿ

ಅಮೆರಿಕದಲ್ಲಿ ಕೋವಿಡ್ ಡೆಲ್ಟಾ ರೂಪಾಂತರ ವ್ಯಾಪಕವಾಗಿ ಹರಡುತ್ತಿದೆ. ಲಸಿಕೆ ಪಡೆದಿರುವ ಸೆನೆಟರ್​ಗೂ ಕೋವಿಡ್​ ದೃಢಪಟ್ಟಿದೆ. ದೇಶದಲ್ಲಿ ಹೊರಾಂಗಣ-ಒಳಾಂಗಣದಲ್ಲೂ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ.

AnthonyFauci
ಆಂಥೋನಿ ಫೌಸಿ
author img

By

Published : Aug 3, 2021, 7:14 AM IST

ವಾಷಿಂಗ್ಟನ್​​: ಅಮೆರಿಕದಲ್ಲಿ ಕೋವಿಡ್​ ಡೆಲ್ಟಾ ರೂಪಾಂತರ ತೀವ್ರ ಆತಂಕ ಸೃಷ್ಟಿಸುತ್ತಿದ್ದು ಶ್ವೇತಭವನ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ. ವೈರಸ್ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಶ್ವದಲ್ಲೇ ಅಧಿಕ ಕೋವಿಡ್ ಪ್ರಕರಣಗಳು:

ಇಡೀ ಜಗತ್ತಿನಲ್ಲೇ ಅಮೆರಿಕದಲ್ಲಿ ಅತಿ ಹೆಚ್ಚು ಜನರಿಗೆ ಕೋವಿಡ್ ದೃಢಪಟ್ಟಿದೆ. ಆಗಸ್ಟ್​ 2 ರವರೆಗೆ ಮೂರೂವರೆ ಕೋಟಿಗೂ ಅಧಿಕ ಜನರಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಈಗಾಗಲೇ ಸುಮಾರು 6,13,000 ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

8.16 ಕೋಟಿ ಮಂದಿಗೆ ವ್ಯಾಕ್ಸಿನೇಷನ್:

ಅಮೆರಿಕದಲ್ಲಿ 12 ವರ್ಷ ಮೇಲ್ಪಟ್ಟ ಅರ್ಹರೆಲ್ಲರಿಗೂ ಕೋವಿಡ್​ ವ್ಯಾಕ್ಸಿನ್ ಹಾಕಲಾಗುತ್ತಿದೆ. ಆಗಸ್ಟ್​ 2 ರವರೆಗೆ 8.16 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 3.1 ಕೋಟಿ ಜನರಿಗೆ ಸಂಪೂರ್ಣ ವ್ಯಾಕ್ಸಿನೇಷನ್ ನಡೆದಿದೆ.

ವ್ಯಾಕ್ಸಿನ್ ಪಡೆದವರಿಗೂ ಕೋವಿಡ್:

ಕೋವಿಡ್ ಲಸಿಕೆ ಪಡೆದ ನಂತರವೂ ಅಮೆರಿಕದ ಸೆನೆಟರ್ (ಸಂಸದ)​​​ ಲಿಂಡ್ಸೆ ಗ್ರಹಾಂಗೆ ಕೋವಿಡ್​ ದೃಢಪಟ್ಟಿದೆ. ಲಿಂಡ್ಸೆಗೆ ಸೋಂಕು ದೃಢವಾಗುತ್ತಿದ್ದಂತೆಯೇ ಇತರ ಸಂಸದರೂ ಕೋವಿಡ್​​ ಪರೀಕ್ಷೆಗೆ ಒಳಪಟ್ಟಿದ್ದಾರೆ. ಗ್ರಹಾಂಗೆ ಶನಿವಾರ ರಾತ್ರಿ ಜ್ವರ ಬಂದಿದ್ದು, ಸೋಮವಾರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ, ಕೋವಿಡ್ ಪಾಸಿಟಿವ್​ ರಿಪೋರ್ಟ್​ ಬಂದಿದ್ದು, 10 ದಿನಗಳ ಕಾಲ ಕ್ವಾರಂಟೈನ್ ಆಗುವುದಾಗಿ ಅವರು ಹೇಳಿದ್ದಾರೆ. ಪ್ರಸ್ತುತ ನನಗೆ ಸೌಮ್ಯವಾದ ರೋಗಲಕ್ಷಣಗಳಿವೆ. ನಾನು ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಸಂತಸವಿದೆ. ಒಂದು ವೇಳೆ ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ದರೆ, ನಾನು ಇದಕ್ಕಿಂತ ಕೆಟ್ಟ ಸ್ಥಿತಿ ಎದುರಿಸಬೇಕಾಗಿತ್ತು ಅನಿಸುತ್ತದೆ ಎಂದು ಲಸಿಕೆ ಹಾಕಿಸಿಕೊಳ್ಳುವುದರ ಪ್ರಾಮುಖ್ಯತೆ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲೂ ಹರಡುತ್ತಿದೆ ಕೋವಿಡ್ ಡೆಲ್ಟಾ ರೂಪಾಂತರ.. 18 ಪ್ರದೇಶಗಳು ಹಾಟ್​ಸ್ಪಾಟ್

ಮಾಸ್ಕ್​ ಧರಿಸುವುದು ಅನಿವಾರ್ಯ

ಕೆಲವು ತಿಂಗಳ ಹಿಂದೆ, ಅಮೆರಿಕದಲ್ಲಿ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಅಲ್ಲಿನ ಆಡಳಿತ ಘೋಷಿಸಿತ್ತು. ಆದರೆ, ಡೆಲ್ಟಾ ರೂಪಾಂತರ ಕೆಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರಾಂತ್ಯಗಳಲ್ಲಿ ಹೊರಾಂಗಣ ಮಾತ್ರವಲ್ಲದೆ, ಒಳಾಂಗಣದಲ್ಲೂ ಜನರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.