ಹೈದರಾಬಾದ್: ಒಮ್ಮೆ ಬಳಸಿದ ಎನ್-95 ಅಥವಾ ಅದಕ್ಕೆ ಸಮಾನವಾದ ಫೇಸ್ ಮಾಸ್ಕ್ಗಳನ್ನು ಶುದ್ಧೀಕರಿಸಿ ಮರುಬಳಸಲು ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್ಡಿಎ) ಅನುಮತಿ ನೀಡಿದೆ. ಇದರಿಂದ ಪ್ರತಿದಿನ ಸುಮಾರು 4 ಮಿಲಿಯನ್ ಬಳಸಿದ ಮಾಸ್ಕ್ಗಳನ್ನು ಮರುಬಳಸಲು ಅವಕಾಶ ಸಿಗಲಿದೆ. ಬಳಸಿದ ಮಾಸ್ಕ್ಗಳನ್ನು ಶುದ್ಧೀಕರಿಸುವ ವ್ಯವಸ್ಥೆಗೆ ಎಫ್ಡಿಎ ಅನುಮತಿ ನೀಡಿದ್ದರಿಂದ ಅಮೆರಿಕದಲ್ಲಿನ ಮಾಸ್ಕ್ ಕೊರತೆಯ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಲಿದೆ.
"ದೇಶದ ಆರೋಗ್ಯ ಕಾರ್ಯಕರ್ತರು ಕೊರೊನಾ ವೈರಸ್ ಸಂಕಷ್ಟದಲ್ಲಿ ಹೋರಾಡುತ್ತಿದ್ದು, ಅವರೇ ನಿಜವಾದ ಹೀರೊಗಳಾಗಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡುವುದು ನಮ್ಮ ಕರ್ತವ್ಯ. ಮಾಸ್ಕ್ ಶುದ್ಧೀಕರಿಸುವ ವ್ಯವಸ್ಥೆಗೆ ಅನುಮೋದನೆ ನೀಡಿದ್ದರಿಂದ ಹೆಚ್ಚುವರಿ ಮಾಸ್ಕ್ಗಳು ಬಳಕೆಗೆ ಲಭ್ಯವಾಗಲಿದ್ದು, ವೈದ್ಯಕೀಯ ಕಾರ್ಯಕರ್ತರ ಆರೋಗ್ಯ ಕಾಪಾಡಲು ಸಹಾಯಕವಾಗಲಿದೆ." ಎಂದು ಎಫ್ಡಿಎ ಕಮೀಷನರ್ ಸ್ಟೀಫನ್ ಹಾನ್ ಹೇಳಿದ್ದಾರೆ.