ವಾಷಿಂಗ್ಟನ್: ಕೊರೊನಾ ವೈರಸ್ ಮುಂದೆ ವಿಶ್ವದ ದೊಡ್ಡಣ್ಣ ಕೂಡಾ ತಲೆ ತಗ್ಗಿಸಿದ್ದಾನೆ. ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಈವರೆಗೆ 3,008 ಜನ ಸಾವನ್ನಪ್ಪಿದ್ದಾರೆ.
ಯುಎಸ್ಎನಲ್ಲಿ ಈವರೆಗೆ 1,63,000 ಜನರಲ್ಲಿ ಸೋಂಕು ಪತ್ತೆಯಾದೆ. ಶಾಕಿಂಗ್ ಅಂದ್ರೆ ಅಮೆರಿಕದ ಪ್ರಮುಖ ನಗರವಾದ ನ್ಯೂಯಾರ್ಕ್ ನಗರವೊಂದರಲ್ಲೇ ಇದುವರೆಗೆ 1200 ಜನ ಸಾವನ್ನಪ್ಪಿದ್ದು, 67,000 ಜನರಿಗೆ ಸೋಂಕು ತಗುಲಿದೆ. ಅಂದರೆ ಅಮೆರಿಕದ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 41ಶೇ. ಸೋಂಕಿತರು ಈ ಒಂದೇ ನಗರದಲ್ಲಿದ್ದಾರೆ. ಅಲ್ಲದೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆಯಲ್ಲೂ ಶೇ. 40 ರಷ್ಟು ಜನ ಇದೇ ನಗರದ ನಿವಾಸಿಗಳು.
ಜಗತ್ತಿನಾದ್ಯಂತ ಈವರೆಗೆ 37,638ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 7,84,000ಜನರಿಗೆ ಸೋಂಕು ದೃಢವಾಗಿದೆ. ಈ ನಡುವೆ 1,65,000 ಜನ ಕೊರೊನಾದಿಂದ ಮುಕ್ತಿ ಪಡೆದಿದ್ದಾರೆ.