ETV Bharat / international

ಲಾಕ್​ಡೌನ್​​ನಿಂದಾಗಿ ಸಿಗಲಿಲ್ಲ ನಿರೋಧಕಗಳು: ಗರ್ಭಧರಿಸಲಿದ್ದಾರೆ 70 ಲಕ್ಷ ಮಹಿಳೆಯರು - ಲಾಕ್​ಡೌನ್​​ನಿಂದಾಗಿ ಸಿಗದ ಗರ್ಭನಿರೋಧಕ

ವಿವಿಧ ದೇಶಗಳಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ ಅನೇಕ ಸಂಕಷ್ಟ ತಂದಿಟ್ಟಿದ್ದು, ಸಮಯಕ್ಕೆ ಸರಿಯಾಗಿ ಗರ್ಭನಿರೋಧಕ ಮಾತ್ರೆ ಸಿಗದ ಕಾರಣ ಸರಿಸುಮಾರು 70 ಲಕ್ಷ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

COVID-19
COVID-19
author img

By

Published : Apr 29, 2020, 6:13 PM IST

Updated : Apr 29, 2020, 7:55 PM IST

ನ್ಯೂಯಾರ್ಕ್​: ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸಿದ್ದು, ಕೆಲವೊಂದು ದೇಶಗಳು ಲಾಕ್​ಡೌನ್​ ಆದೇಶ ಹೊರಹಾಕಿರುವ ಕಾರಣ ಅಗತ್ಯ ವಸ್ತು ಪಡೆದುಕೊಳ್ಳಲು ಜನರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ವಿಶ್ವಸಂಸ್ಥೆ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ.

114 ದೇಶದ 450 ಮಿಲಿಯನ್​ಗೂ ಅಧಿಕ ಮಧ್ಯಮ ವರ್ಗದ ಮಹಿಳೆಯರು ಲಾಕ್​ಡೌನ್​ ವೇಳೆ ಗರ್ಭನಿರೋಧಕ ಬಳಕೆ ಮಾಡಲು ಆಗದ ಕಾರಣ ಗರ್ಭಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಅದರಲ್ಲಿ 70 ಲಕ್ಷ ಮಹಿಳೆಯರು ಮುಂದಿನ ತಿಂಗಳಲ್ಲಿ ಗರ್ಭಧರಿಸಲಿದ್ದಾರೆ ಎಂದು ತಿಳಿಸಿದೆ.

COVID-19
ಲಾಕ್​ಡೌನ್​​ನಿಂದಾಗಿ ಸಿಗದ ಗರ್ಭನಿರೋಧಕ

ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ, ಗರ್ಭನಿರೋಧಕಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಸುಲಭವಾಗಿ ಅದು ಈ ವೇಳೆ ಲಭ್ಯವಾಗುತ್ತಿಲ್ಲವಾದ್ದರಿಂದ ಮಹಿಳೆಯರು ಗರ್ಭಿಣಿಯರಾಗಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ದತ್ತಾಂಶ ಬಿಡುಗಡೆ ಮಾಡಿದೆ.

ವಿಶ್ವದಲ್ಲಿ ಜನಸಂಖ್ಯೆ ಮತ್ತಷ್ಟು ಏರಿಕೆಯಾಗಲು ಇದೂ ಒಂದು ರೀತಿಯಲ್ಲಿ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ತಿಳಿಸಿದ್ದು, ದೇಶದ ಆರ್ಥಿಕತೆ ಮತ್ತಷ್ಟು ಉಲ್ಭಣಗೊಳ್ಳಲಿದೆ ಎಂದಿದ್ದಾರೆ. ದೇಶದಲ್ಲಿ ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಗರ್ಭನಿರೋಧಕಗಳ ರಫ್ತಿನಲ್ಲಿ ವ್ಯತ್ಯಯವಾಗಿದ್ದು, ಸುಲಭವಾಗಿ ಜನರ ಕೈಗೆ ಸಿಗುತ್ತಿಲ್ಲವಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲಿಂಗ ತಾರತಮ್ಯ,ಕೌಟುಂಬಿಕ ಕಲಹಗಳಲ್ಲೂ ಏರಿಕೆ ಕಂಡು ಬಂದಿದೆ ಎಂದು ಅದು ಅಧ್ಯಯನದಲ್ಲಿ ತಿಳಿಸಿದೆ.

Last Updated : Apr 29, 2020, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.