ETV Bharat / international

ಅಮೆರಿಕದಲ್ಲಿ ಏರುತ್ತಿರುವ ಕೊರೊನಾ ವೈರಸ್ ಸೋಂಕಿತರು... ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ಕೊರೊನಾ ಅಟ್ಟಹಾಸಕ್ಕೆ ಈವರೆಗೆ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 218ಕ್ಕೇರಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸದ್ಯ 14,299 ದಾಟಿದೆ. ಅಮೆರಿಕ ಕೊರೊನಾಕ್ಕೆ ಹೆಚ್ಚು ಬಲಿಯಾದ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Coronavirus cases surge in US, fatalities cross 200
ಯುಎಸ್​ ನಲ್ಲಿ ಏರುತ್ತಿರುವ ಕರೋನ ವೈರಸ್ ಸೋಂಕಿತರು, ಸಾವುಗಳು ಸಂಖ್ಯೆ
author img

By

Published : Mar 20, 2020, 12:41 PM IST

ವಾಷಿಂಗ್​ಟನ್​(ಅಮೆರಿಕ): ಕೊರೊನಾ ದಾಳಿಗೆ ಈವರೆಗೂ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 218 ತಲುಪಿದೆ. ಹಾಗೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸದ್ಯ 14,299 ದಾಟಿದೆ. ಇನ್ನೂ ಅಮೆರಿಕ ಕೊರೊನಾಕ್ಕೆ ಹೆಚ್ಚು ಬಲಿಯಾದ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಇನ್ನೂ, 80,967 ಸೋಂಕಿತ ಪ್ರಕರಣಗಳು ಮತ್ತು 3,248 ಸಾವುಗಳಿಂದಾಗಿ ಚೀನಾ ಮೊದಲ ಸ್ಥಾನದಲ್ಲಿವೆ. ಇಟಲಿಯಲ್ಲಿ 41,035 ಸೋಂಕಿತ ಪ್ರಕರಣಗಳು ಮತ್ತು 3,405 ಸಾವುಗಳು, ಇರಾನ್ ನಲ್ಲಿ18,304 ಸೋಂಕಿತ ಪ್ರಕರಣಗಳು ಮತ್ತು 1,284 ಸಾವುಗಳು, ಸ್ಪೇನ್ ನಲ್ಲಿ19,077 ಸೋಂಕಿತ ಪ್ರಕರಣಗಳು ಮತ್ತು 831 ಸಾವುಗಳು, ಜರ್ಮನಿಯಲ್ಲಿ 15,320 ಸೋಂಕಿತ ಪ್ರಕರಣಗಳು ಮತ್ತು 44 ಸಾವುಗಳು ಮತ್ತು ಫ್ರಾನ್ಸ್ ನಲ್ಲಿ 10,995 ಸೋಂಕಿತ ಪ್ರಕರಣಗಳು ಮತ್ತು 372 ಸಾವುಗಳು ಸಂಭವಿಸಿವೆ.

ಅತೀ ವೇಗವಾಗಿ ಹಬ್ಬುತ್ತಿರುವ ಕೊರೊನಾ ಮಹಾಮಾರಿಯನ್ನು ತಡೆಯಲು ಆರೋಗ್ಯ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸೋಂಕಿತ ಪ್ರಕರಣಗಳು ಮತ್ತು ಸಾವುಗಳೆರಡರಲ್ಲೂ ಗಮನಾರ್ಹ ಏರಿಕೆ ಕಂಡುಬಂದಿರುವ ಹಿನ್ನಲೆ ಯುಎಸ್ ಹಲವಾರು ನಿರ್ಧಾರಗಳನ್ನು ಕೈಗೊಂಡಿವೆ.

ಕೊಲಂಬಿಯಾ ಮತ್ತು ಪೋರ್ಟೊ ರಿಕೊದಲ್ಲಿ ಕೊರೊನಾವೈರಸ್ ಪ್ರಕರಣಗಳು ನಿರಂತರ ವರದಿಯಾಗುತ್ತಲೇ ಇವೆ. ಯುಎಸ್​ ನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾಲಿಫೋರ್ನಿಯಾ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ತಡೆಯುವ ಸಲುವಾಗಿ ತನ್ನ ಸುಮಾರು 40 ಮಿಲಿಯನ್ ಜನರಿಗೆ ಮನೆಯಲ್ಲಿಯೇ ಇರಬೇಕೆಂದು ಗುರುವಾರ ಆದೇಶಿಸಿದೆ.

"ಇದು ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಒಂದಾಗಲಿದೆ. ನ್ಯೂಯಾರ್ಕ್ ನಗರದಲ್ಲಿ 3,615 ಕೊರೊನಾ ಪಾಸಿಟಿವ್​ ಪ್ರಕರಣಗಳು ಮತ್ತು 22 ಸಾವುಗಳು ವರದಿಯಾಗಿ ದಿಗ್ಭ್ರಮೆಗೊಳಿಸಿದೆ" ಎಂದು ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲಾಸಿಯೊ ಹೇಳಿದರು. ಈ ವೇಳೆ ಅವರು ನಿವೃತ್ತ ಆರೋಗ್ಯ ಕಾರ್ಯಕರ್ತರು ಸ್ವಯಂಸೇವಕರಾಗಿ ಬಂದು ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.