ವಾಷಿಂಗ್ಟನ್ (ಯುಎಸ್) : ಸಣ್ಣ ವ್ಯವಹಾರ ವೇತನದಾರರ ನಿಧಿಯನ್ನು ಭರ್ತಿ ಮಾಡಲು ಮತ್ತು ಆಸ್ಪತ್ರೆ ಹಾಗೂ ವೈರಸ್ ಪರೀಕ್ಷಾ ಕಾರ್ಯಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಲು 483 ಬಿಲಿಯನ್ ಡಾಲರ್ ಬೃಹತ್ ಮೊತ್ತದ ವಿಶೇಷ ಕೊರೊನಾ ಪ್ಯಾಕೇಜ್ ಘೋಷಿಸಲು ಅಮೆರಿಕ ಸರ್ಕಾರ ಮುಂದಾಗಿದೆ.
ಉದ್ದೇಶಿತ ಯೋಜನೆಗೆ ವಿಶೇಷ ಮಸೂದೆ ಮಂಡಿಸಿ ಶೀಘ್ರ ಸಂಸತ್ ಅಂಗೀಕಾರ ಪಡೆದುಕೊಳ್ಳಲು ಅಧಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದು, ಮಂಗಳವಾರ ಸೆನೆಟ್ನಲ್ಲಿ ಮಸೂದೆ ಪಾಸ್ ಆಗಿದೆ. ಗುರುವಾರ ಮತದಾನಕ್ಕೆ ಹೋಗಲಿದೆ.
ಬೃಹತ್ ಕೊರೊನಾ ಪ್ಯಾಕೇಜ್ನಲ್ಲಿ ಸಣ್ಣ ಉದ್ಯಮಗಳಿಗೆ ಹಣಕಾಸಿನ ನೆರವು ನೀಡಲು 331 ಬಿಲಿಯನ್, ಆರೋಗ್ಯ ಕ್ಷೇತ್ರಕ್ಕೆ 100 ಬಿಲಿಯನ್, ಆಸ್ಪತ್ರೆಗಳಿಗೆ 75 ಬಿಲಿಯನ್, ವೈರಸ್ ಪರಿಕ್ಷಾ ಕಾರ್ಯಗಳಿಗೆ 25 ಬಿಲಿಯನ್ ಹಾಗೂ ದೇಶದ ಆರ್ಥಿಕತೆಯ ಉತ್ತೇಜನಗೊಳಿಸುವ ಸಲುವಾಗಿ ಸಣ್ಣ ಉದ್ಯಮಗಳಿಗೆ ಸಾಲ ನೀಡಲು 60 ಬಿಲಿಯನ್ ಡಾಲರ್ ಮೀಸಲಿಡಲಾಗುತ್ತದೆ.