ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೇ ಗುರುವಾರ ದೋಷಾರೋಪ, ಮಹಾಭಿಯೋಗ(Impeachment)ಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಲು ಅಮೆರಿಕ ಸಂಸತ್ನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಸದ್ಯ ಟ್ರಂಪ್ ಅವರ ಆಡಳಿತದ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಈ ಮಹಾಭಿಯೋಗ ನಡೆಯಲಿದ್ದು, ಇದು ಯಾವ ರೀತಿ ನಡೆಯಲಿದೆ ಮತ್ತು ಟ್ರಂಪ್ ವಜಾಗೊಳ್ಳುತ್ತಾರಾ ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಹೀಗಿದೆ
ಅಮೆರಿಕ ಅಧ್ಯಕ್ಷರ ವಿರುದ್ಧ ಇಂಪೀಚ್ಮೆಂಟ್ ಇಕ್ಕಳ..! ಗುರುವಾರ ದೋಷಾರೋಪ ಪರ ಮತದಾನ
ಮಹಾಭಿಯೋಗ ಏಕೆ..?
ಅಮೆರಿಕದ ಕಾನೂನಿನ ಪ್ರಕಾರ ಅಲ್ಲಿನ ಅಧ್ಯಕ್ಷರಾಗಿರುವವರು ದೇಶದ ಚುನಾವಣೆ ವ್ಯವಸ್ಥೆಯಲ್ಲಿ ಬೇರೆ ರಾಷ್ಟ್ರಗಳ ಸಹಾಯವನ್ನ ಯಾವುದೇ ಕಾರಣಕ್ಕೂ ಪಡೆಯುವಂತಿಲ್ಲ ಎಂಬ ನಿರ್ಬಂಧ ಇದೆ. ಇನ್ನು ಅಮೆರಿಕದ ಆಂತರಿಕ ವಿಚಾರದಲ್ಲಿ ಮೂರನೇ ದೇಶ ಹಸ್ತಕ್ಷೇಪ ಮಾಡುವುದು ಹಾಗೂ ಮತನಾಡುವುದು ಕಾನೂನು ಬಾಹಿರ ಎಂಬ ಕಟ್ಟು ನಿಟ್ಟಿನ ನಿಯಮವನ್ನ ಜಾರಿ ಮಾಡಲಾಗಿದೆ. ವೈಯಕ್ತಿಕ ಹಿತಾಸಕ್ತಿಗೆ ಅಧಿಕಾರ ದುರುಪಯೋಗ ಅಥವಾ ಭ್ರಷ್ಟಾಚಾರದಲ್ಲಿ ತೊಡಗದ್ದಿರೆ ಅಧ್ಯಕ್ಷ ವಿರುದ್ಧ ಅಲ್ಲಿನ ಸಂವಿಧಾನದ ಪ್ರಕಾರ ಮಹಾಭಿಯೋಗ ನಡೆಸಬಹುದು. ಈ ತನಿಖೆ ಮೂಲಕ ಅಧ್ಯಕ್ಷೀಯ ಅಭ್ಯರ್ಥಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಭಾರತದಲ್ಲಿ ರಾಷ್ಟ್ರಪತಿ ಹಾಗೂ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ನಡೆಸಬಹುದು. ನಮ್ಮಲ್ಲಿ ಇದುವರೆಗೂ ಯಾವುದೇ ರಾಷ್ಟ್ರಪತಿ ವಿರುದ್ಧ ಮಹಾಭಿಯೋಗ ಮಂಡನೆ ಮಾಡಿಲ್ಲ.
ಟ್ರಂಪ್ ಮಹಾಭಿಯೋಗ ಪ್ರಕ್ರಿಯೆ ಹೇಗೆ?
ಕಾಂಗ್ರೆಸ್ ಸ್ಪೀಕರ್ ಮೂಲಕ ದೋಷಾರೋಪದ ಪ್ರಕ್ರಿಯೆಗಳು ಆರಂಭವಾಗಲಿದ್ದು, ತನಿಖಾ ಸಮಿತಿ ಮೂಲಕ ಆರೋಪಗಳ ವಿಚಾರಣೆ ನಡೆಯುತ್ತದೆ. ತನಿಖೆಯಲ್ಲಿ ತಪ್ಪಿತಸ್ಥ ಎಂದು ತಿಳಿದುಬಂದರೆ ಬಹುಮತದ ನಿರ್ಣಯ ಪಡೆದು ಮಹಾಭಿಯೋಗದ ಎರಡನೇ ಹಂತಕ್ಕೆ ಕಳುಹಿಸಲು ಕಾಂಗ್ರೆಸ್‌ಗೆ ಅಧಿಕಾರವಿದೆ.
ಸೆನೆಟ್‌ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಮ್ಮುಖದಲ್ಲಿ ಅಧ್ಯಕ್ಷರ ವಿಚಾರಣೆ ನಡೆಯಲಿದ್ದು, ಆರೋಪ ಸಾಬೀತಾದರೆ ಎರಡನೇ ಮೂರರಷ್ಟು ಬಹುಮತದಿಂದ ಅಧ್ಯಕ್ಷರ ಮಹಾಭಿಯೋಗ ನಡೆಸಲಾಗುತ್ತದೆ.
ಟ್ರಂಪ್ ಅವರ ವಜಾ ಸಾಧ್ಯವೇ?
ಅಮೆರಿಕನ್ ಕಾಂಗ್ರೆಸ್‌ನಲ್ಲಿ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಬಹುಮತವಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಮಹಾಭಿಯೋಗದ ಪ್ರಕ್ರಿಯೆಗಳಿಗೆ ಸುಲಭವಾಗಿ ಚಾಲನೆ ಸಿಗಲಿದೆ. ಆದರೆ, ಸೆನೆಟ್‌ನಲ್ಲಿ ಟ್ರಂಪ್ ಅವರಿಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಯಾವುದೇ ಸರ್ಕಸ್ ನಡೆಸಿದರೂ ಸೆನೆಟ್‌ನಲ್ಲಿ ಟ್ರಂಪ್ ಮಹಾಭಿಯೋಗ ಯಶಸ್ವಿಯಾಗುವ ಸಾಧ್ಯತೆಗಳು ಬಹುತೇಕ ಕಡಿಮೆಯೇ ಸರಿ.
435 ಸದಸ್ಯ ಬಲದ ಕಾಂಗ್ರೆಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ. ಇನ್ನು 100 ಸದಸ್ಯ ಬಲದ ಸೆನೆಟ್‌ನಲ್ಲಿ ರಿಪಬ್ಲಿಕ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಸೆನೆಟ್‌ನಲ್ಲಿ ಮಹಾಭಿಯೋಗ ಯಶಸ್ವಿಯಾಗಬೇಕಾದರೆ ಕನಿಷ್ಠ 67 ಸದಸ್ಯರ ಬೆಂಬಲ ಬೇಕು. ಆದರೆ ಈ ಸಂಖ್ಯಾ ಬೆಂಬಲ ಡೆಮಾಕ್ರಟಿಕ್ ಪಕ್ಷಕ್ಕೆ ಸಿಗುವುದು ತುಂಬಾನೇ ಕಷ್ಟ. ಹೀಗಾಗಿ ಮಹಾಭೀಯೋಗ ಸಕ್ಸಸ್ ಆಗೋದು ಡೌಟ್
ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಕಾಂಗ್ರೆಸ್): 435
- ಡೆಮಾಕ್ರಟಿಕ್: 238
- ರಿಪಬ್ಲಿಕನ್: 198
- ಸ್ವತಂತ್ರರು: 2
ಸೆನೆಟ್: 100
- ರಿಪಬ್ಲಿಕನ್: 53
- ಡೆಮಾಕ್ರಟಿಕ್: 45
- ಸ್ವತಂತ್ರರು: 2