ರಿಯೊ ಡಿ ಜನೈರೊ: ಕೋವಿಡ್ ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸಲುವಾಗಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆಯನ್ನು ಬುಧವಾರ ರಾತ್ರಿ ವಿಶೇಷ ಪ್ರೊಜೆಕ್ಷನ್ಲ್ಲಿ ಬೆಳಗಿಸಲಾಯಿತು.
ವಿಶ್ವಸಂಸ್ಥೆಯ ಸಹಕಾರದೊಂದಿಗೆ ಬ್ರೆಜಿಲ್‌ನ ಬಿಷಪ್‌ಗಳ ರಾಷ್ಟ್ರೀಯ ಸಮ್ಮೇಳನ (ಸಿಎನ್‌ಬಿಬಿ) ಮತ್ತು ಬ್ರೆಜಿಲಿಯನ್ ಕ್ಯಾರಿಟಾಸ್ (ಸಿಎನ್‌ಬಿಬಿಯ ಒಂದು ಸಂಸ್ಥೆ) ಇದನ್ನು ಆಯೋಜಿಸಿದೆ.
ಇಡೀ ಜಗತ್ತೇ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ವೇಳೆ ಭರವಸೆ ಮೂಡಿಸಲು, ವೈರಸ್ಗೆ ಬಲಿಯಾದವರಿಗೆ ಗೌರವ ಸಲ್ಲಿಸಲು ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ರಕ್ಷಣಾ, ಸ್ವಚ್ಛತಾ ಸಿಬ್ಬಂದಿ ಮತ್ತು ಸ್ವಯಂ ಸೇವಕರಿಗೆ ಕೃತಜ್ಞತೆ ಅರ್ಪಿಸಲು ಏಸು ಕ್ರಿಸ್ತನ ಪ್ರತಿಮೆ ಬೆಳಗಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.
ಬ್ರೆಜಿಲ್‌ನಲ್ಲಿ ಈವರೆಗೆ ಕೋವಿಡ್ಗೆ 60,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1.4 ಮಿಲಿಯನ್ ಪ್ರಕರಣಗಳು ಪತ್ತೆಯಾಗಿವೆ.