ETV Bharat / international

ಕೊರೊನಾ ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿತೇ?: ನಿಲ್ಲುತ್ತಿಲ್ಲ ದೊಡ್ಡಣ್ಣ vs ಡ್ರ್ಯಾಗನ್‌ ಕಾಳಗ - China Scientists Refusing To Cooperate With World Health Experts

ಚೀನಾದಲ್ಲಿರುವ ಜಗತ್ತಿನ ಅತ್ಯುತ್ತಮ ವಿಜ್ಞಾನಿಗಳು ವಿಶ್ವ ಆರೋಗ್ಯ ತಜ್ಞರೊಂದಿಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ. ಅಲ್ಲಿ ನಿಜವಾಗಿಯೂ ಏನಾಯಿತು ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಚೀನಾ ಹಿಂದೇಟು ಹಾಕುತ್ತಿದೆ. ಜಗತ್ತಿನಲ್ಲಿ ಭಯಾನಕವಾಗಿ ಈ ಸಾಂಕ್ರಾಮಿಕ ರೋಗ ಹರಡಿರುವ ಸಮಯದಲ್ಲಿ ಇದು ಸ್ವೀಕಾರಾರ್ಹವಲ್ಲ- ಮೈಕ್ ಪೊಂಪಿಯೊ, ಅಮೆರಿಕದ ರಾಜ್ಯ ಕಾರ್ಯದರ್ಶಿ

Pompeo
ಪೊಂಪಿಯೊ
author img

By

Published : May 4, 2020, 9:58 AM IST

ವಾಷಿಂಗ್ಟನ್​: ಕೊರೊನಾ ಹೇಗೆ ಹುಟ್ಟಿಕೊಂಡಿದೆ ಎಂಬುದನ್ನು ಸರಿಯಾಗಿ ತನಿಖೆ ಮಾಡಲು ಪಾಶ್ಚಿಮಾತ್ಯ ಜಗತ್ತಿಗೆ ಚೀನಾ ಪ್ರವೇಶವನ್ನು ನಿರ್ಬಂಧಿಸುತ್ತಿದೆ. ಇಲ್ಲಿನ ವಿಶ್ವದ ಅತ್ಯುತ್ತಮ ವಿಜ್ಞಾನಿಗಳು ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ನಿಭಾಯಿಸಲು ಸಹಕರಿಸುತ್ತಿಲ್ಲ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಆರೋಪಿಸಿದ್ದಾರೆ.

  • The Chinese Communist Party continues to block access to the Western world, the world's best scientists, refusing to cooperate with world health experts, to figure out exactly what happened. This unacceptable during an ongoing threat, an ongoing pandemic. pic.twitter.com/qa156CfTAB

    — Secretary Pompeo (@SecPompeo) May 3, 2020 " class="align-text-top noRightClick twitterSection" data=" ">

ಕೊರೊನಾ ವೈರಸ್​ ಚೀನಾದ ವುಹಾನ್​ ಪ್ರಯೋಗಾಲಯದಲ್ಲೇ ಲೀಕ್​ ಆಗಿದೆ ಎಂದು ಅಮೆರಿಕ ಆರೋಪಿಸುತ್ತಲೇ ಬರುತ್ತಿದೆ. ಈ ಬಗ್ಗೆ ನೇರ ಆರೋಪ ಮಾಡಲು ನಿರಾಕರಿಸಿರುವ ಪೊಂಪಿಯೊ ಆ ಬಗ್ಗೆ ನಾನೇನೂ ಹೇಳಲಿಚ್ಛಿಸುವುದಿಲ್ಲ. ಇದಕ್ಕೆ ಶೀಘ್ರದಲ್ಲೇ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

ಚೀನಾದಲ್ಲಿರುವ ಜಗತ್ತಿನ ಅತ್ಯುತ್ತಮ ವಿಜ್ಞಾನಿಗಳು ವಿಶ್ವ ಆರೋಗ್ಯ ತಜ್ಞರೊಂದಿಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ. ಏನಾಯಿತು ಎಂದು ಸ್ಪಷ್ಟವಾಗಿ ತಿಳಿಸಲು ಚೀನಾ ಹಿಂದೇಟು ಹಾಕುತ್ತಿದೆ. ಸದ್ಯ ಜಗತ್ತಿನಲ್ಲಿ ಭಯಾನಕವಾಗಿ ಈ ಸಾಂಕ್ರಾಮಿಕ ರೋಗ ಹರಡಿರುವ ಸಮಯದಲ್ಲಿ ಇದು ಸ್ವೀಕಾರಾರ್ಹವಲ್ಲ ಎಂದು ಪೊಂಪಿಯೊ ಬೇಸರ ವ್ಯಕ್ತಪಡಿಸಿದ್ದಾರೆ.

ಆದ್ರೆ, ಅಮೆರಿಕ ಪದೇ ಪದೇ ವಿಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಜಗತ್ತಿನ ದಾರಿ ತಪ್ಪಿಸುತ್ತಿದೆ ಎನ್ನುವುದನ್ನು ಬಿಂಬಿಸುವ ವಿಡಿಯೋ ರಿಲೀಸ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.