ಕೆನಡಾ: ಹೊಸ ರೂಪಾಂತರದ ಕೊರೊನಾ ವೈರಸ್ ಹಲವು ದೇಶಗಳಲ್ಲಿ ಆತಂಕ ಮೂಡಿಸಿದೆ. ಇದೀಗ ಕೋವಿಡ್ ರೂಪಾಂತರದ ಮೊದಲ ಎರಡು ಪ್ರಕರಣಗಳು ಕೆನಡಾದಲ್ಲಿ ಸಹ ದೃಢಪಟ್ಟಿವೆ.
ಈ ಕುರಿತು ಒಂಟಾರಿಯೊದ ಸಹಾಯಕ ಮುಖ್ಯ ವೈದ್ಯಾಧಿಕಾರಿ ಡಾ. ಬಾರ್ಬರಾ ಯಾಫೆ ಮಾಹಿತಿ ನೀಡಿದ್ದು, ಡರ್ಹಾಮ್ ಪ್ರದೇಶದ ದಂಪತಿಯಲ್ಲಿ ಕೋವಿಡ್ ರೂಪಾಂತರದ ಪ್ರಕರಣ ಕಂಡು ಬಂದಿದೆ. ಈಗಾಗಲೇ ಇವರ ಟ್ರಾವೆಲ್ ಹಿಸ್ಟ್ರಿ ಮತ್ತು ಸಂಪರ್ಕಿತರನ್ನು ಪತ್ತೆಹಚ್ಚಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಿಟನ್ನಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರದ ಕೋವಿಡ್-19 ವೈರಸ್ ಪತ್ತೆಯಾಗಿದ್ದು, ಡೆನ್ಮಾರ್ಕ್, ಆಸ್ಟ್ರೇಲಿಯಾ , ಬೆಲ್ಜಿಯಂ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಇಸ್ರೇಲ್ನಲ್ಲಿ ಸಹ ರೂಪಾಂತರಗೊಂಡ ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಈ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಆದರೂ ಸಹ ಯಾರು ಭಯ ಪಡುವ ಅಗತ್ಯವಿಲ್ಲ. ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿ, ಮನೆಯಲ್ಲಿಯೇ ಇರುವಂತೆ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.