ETV Bharat / international

ಬ್ರೆಜಿಲ್​ನಲ್ಲಿ ಒಂದೇ ದಿನಕ್ಕೆ 3000 ಜನ ಕೋವಿಡ್​ಗೆ ಬಲಿ.. ಇದು ವಿಶ್ವಕ್ಕೆ ಎಚ್ಚರಿಕೆಯ ಗಂಟೆ!

ಬ್ರೆಜಿಲ್​ ದೇಶದಲ್ಲಿ ಕೊರೊನಾ ಸಾಂಕ್ರಮಿಕ ರೋಗ ತಾಂಡವವಾಡುತ್ತಿದೆ. ಒಂದೇ ದಿನಕ್ಕೆ ಅಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಇದು ವಿಶ್ವಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

Brazil coronavirus cases  Brazil coronavirus deaths  coronavirus deaths  Brazil coronavirus  ಬ್ರೆಜಿಲ್​ನಲ್ಲಿ ಕೊರೊನಾ ತಾಂಡವಾ  ಬ್ರೆಜಿಲ್​ನಲ್ಲಿ ಕೊರೊನಾದಿಂದ 3000 ಜನ ಸಾವು  ಬ್ರೆಜಿಲ್​ನಲ್ಲಿ ಕೊರೊನಾದಿಂದ 3000 ಜನ ಸಾವು ಸುದ್ದಿ  ಬ್ರೆಜಿಲ್​ ಕೊರೊನಾ ಸುದ್ದಿ  ಬ್ರೆಜಿಲ್​ ಕೊರೊನಾ ಸಾವು ಸುದ್ದಿ
ಒಂದೇ ದಿನಕ್ಕೆ 3000 ಜನ ಕೋವಿಡ್​ಗೆ ಬಲಿ
author img

By

Published : Mar 24, 2021, 8:50 AM IST

ರಿಯೋ ಡಿ ಜನೈರೊ(ಬ್ರೆಜಿಲ್​): ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶವು ಕೊರೊನಾ ಸಾಂಕ್ರಾಮಿಕ ರೋಗದ ಜಾಗತಿಕ ಕೇಂದ್ರ ಬಿಂದುವಾಗಿದೆ. ಬ್ರೆಜಿಲ್​ ದೇಶದಲ್ಲಿ ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಮಧ್ಯ ಕೊರೊನಾ ರುದ್ರ ತಾಂಡವಾಡುತ್ತಿದೆ. ಇತರ ರಾಷ್ಟ್ರಗಳಿಗಿಂತ ಬ್ರೆಜಿಲ್​ನಲ್ಲಿ ನಿತ್ಯ ವೈರಸ್‌ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಅನೇಕ ಕಟ್ಟು ನಿಟ್ಟಿನ ಕ್ರಮಗಳ ನಡುವೆಯೂ ಕೊರೊನಾ ಉಲ್ಭಣವಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಾಷ್ಟ್ರದಲ್ಲಿ ಮಂಗಳವಾರ ದಾಖಲೆಯ ಸಾವು ಕಂಡಿದೆ. ಬರೋಬ್ಬರಿ 3,251 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಬ್ರೆಜಿಲ್‌ನ ಹೆಚ್ಚು ಜನಸಂಖ್ಯೆ ಹೊಂದಿರುವ ಸಾವೊ ಪಾಲೊ ನಗರವೊಂದರಲ್ಲೇ 1,021 ಜನ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಸಾಂಕ್ರಾಮಿಕ ರೋಗವು ಬ್ರೆಜಿಲ್ ದೇಶದ ಆರೋಗ್ಯ ವ್ಯವಸ್ಥೆಗಳನ್ನು ಕುಸಿಯುವ ಹಂತಕ್ಕೆ ತಂದಿದೆ. ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಭರ್ತಿಯಾಗಿವೆ. ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕದ ವೆಂಟಿಲೇಟರ್​ಗಳ ಸಂಗ್ರಹಗಳು ಕ್ಷೀಣಿಸುತ್ತಿವೆ.

ಬ್ರೆಜಿಲ್‌ನ 26 ರಾಜ್ಯಗಳಲ್ಲಿ ಏಳು ರಾಜ್ಯಗಳು ವೆಂಟಿಲೇಟರ್​ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಲ್ಲಿ ನೂರಾರು ವೆಂಟಿಲೇಟರ್​ ಸಿಲಿಂಡರ್‌ಗಳನ್ನು ರವಾನಿಸಲು ಮತ್ತು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಬ್ರೆಜಿಲ್​ನಲ್ಲಿ ಇದುವರೆಗೆ ಕೊರೊನಾದಿಂದ ಮೃತಪಟ್ಟ ಸಂಖ್ಯೆ 300,000 ಕ್ಕೆ ತಲುಪುತ್ತಿದೆ. ಇದು ಪ್ರಪಂಚದ ಎರಡನೇ ಅತಿ ಹೆಚ್ಚು ಕೋವಿಡ್​ನಿಂದ ಮೃತ ಪಟ್ಟ ಸಂಖ್ಯೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.