ರಿಯೊ ಡಿ ಜನೈರೊ, ಬ್ರೆಜಿಲ್ : ಲ್ಯಾಟಿನ್ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ನ ಹೊಸ ರೂಪಾಂತರಿಯಾದ ಒಮಿಕ್ರೋನ್ ಕಾಣಿಸಿಕೊಂಡಿದೆ. ಉತ್ತರ ಅಮೆರಿಕದ ರಾಷ್ಟ್ರಗಳಲ್ಲೂ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಬ್ರೆಜಿಲಿಯನ್ ಹೆಲ್ತ್ ರೆಗ್ಯುಲೇಟರಿ ಏಜೆನ್ಸಿಯ ಪ್ರಕಾರ, ದಂಪತಿಯಲ್ಲಿ ಒಮಿಕ್ರೋನ್ ವೈರಸ್ ಕಾಣಿಸಿಕೊಂಡಿದೆ. ಸೋಂಕಿಗೆ ಒಳಗಾದ ವ್ಯಕ್ತಿ ನವೆಂಬರ್ 23ರಂದು ದಕ್ಷಿಣ ಆಫ್ರಿಕಾದಿಂದ ಬ್ರೆಜಿಲ್ನ ಸಾವೊ ಪಾಲೊ ನಗರಕ್ಕೆ ಆಗಮಿಸಿದ್ದ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯ ಪತ್ನಿ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವೆಂಬರ್ 9ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ವೈರಸ್ ಪತ್ತೆಯಾಗಿತ್ತು. ಇದಾದ ನಂತರ ಬ್ರೆಜಿಲಿಯನ್ ಸರ್ಕಾರವು ದಕ್ಷಿಣ ಆಫ್ರಿಕಾದಿಂದ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿತ್ತು.
ಈಗ ಒಮಿಕ್ರೋನ್ ಕೂಡ ಹಲವು ರೂಪಾಂತರಗಳನ್ನು ಹೊಂದಿದೆ. ಈ ವಿಚಾರ ತುಂಬಾ ಕಳವಳಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.
ಜಗತ್ತಿನಲ್ಲಿ ಕೋವಿಡ್ ಹಾಟ್ಸ್ಪಾಟ್ ಆಗಿರುವ ಬ್ರೆಜಿಲ್ನಲ್ಲಿ ಬ್ರೆಜಿಲ್ 22 ಮಿಲಿಯನ್ಗೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿವೆ. 6 ಲಕ್ಷದ 15 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ನೈಜೀರಿಯಾ ಜೈಲಿನ ಮೇಲೆ ಉಗ್ರರ ದಾಳಿ ; 11 ಮಂದಿ ಸಾವು, 262 ಕೈದಿಗಳು ಪರಾರಿ