ವಾಷಿಂಗ್ಟನ್ (ಯು.ಎಸ್): ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಕೇಂದ್ರಗಳನ್ನು ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಒಬಾಮಾ ಆಡಳಿತದಲ್ಲಿದ್ದ ಅಧಿಕಾರಿಯನ್ನು ಆಯ್ಕೆ ಮಾಡಿದ್ದಾರೆ.
ಚಿಕ್ವಿಟಾ ಬ್ರೂಕ್ಸ್-ಲಾಸೂರ್ ಎಂಬ ಕಪ್ಪು ವರ್ಣೀಯ ಮಹಿಳೆ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಈ ಸಂಸ್ಥೆ ಮೆಡಿಕೇರ್, ಮೆಡಿಕೈಡ್, ಮಕ್ಕಳ ಆರೋಗ್ಯ ವಿಮೆ ಮತ್ತು ಕೈಗೆಟುಕುವ ಆರೈಕೆ ಕಾಯ್ದೆಯನ್ನು ಹೊಂದಿದ್ದು, "ಒಬಾಮಕೇರ್" ಎಂದು ಕರೆಯಲ್ಪಡುತ್ತದೆ.
ಈ ಸಂಸ್ಥೆ ಸರ್ಕಾರಿ ಆರೋಗ್ಯ ವಿಮಾ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತದೆ ಮತ್ತು ಇದು ಆರೋಗ್ಯ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಪ್ರತಿ 3ರಲ್ಲಿ 1 ಅಮೆರಿಕನ್ನರು ಇದರ ಭಾಗವಾಗಿದ್ದಾರೆ.
ಇದು ನವಜಾತ ಶಿಶುಗಳಿಂದ ಹಿಡಿದು ನರ್ಸಿಂಗ್ ಹೋಂ ನಿವಾಸಿಗಳವರೆಗೆ 130 ದಶಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ.