ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಜೋ ಬೈಡನ್ ಅವರು, ವಿದೇಶಿ ನಾಯಕರೊಂದಿಗಿನ ಮೊದಲ ದೂರವಾಣಿ ಕರೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇವ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಈ ಕುರಿತು ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕೀ ಸ್ಟೋನ್ ಪೈಪ್ಲೈನ್ ಯೋಜನೆ ಕುರಿತಾಗಿ ಉಭಯ ನಾಯಕರು ಚರ್ಚಿಸಬಹುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಟ್ರುಡೇವ್, ನಾವು ಅಧ್ಯಕ್ಷ ಬೈಡನ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದರು. ಮಾಲಿನ್ಯ ಕಡಿಮೆ ಮಾಡಲು, ಕೋವಿಡ್ -19 ನಿಯಂತ್ರಣ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚೇತರಿಕೆಗೆ ಬೆಂಬಲ ನೀಡುವ ಕ್ರಮಗಳಿಗಾಗಿ ಅವರೊಂದಿಗೆ ಕೈ ಜೋಡಿಸಲು ನಾವು ಸಿದ್ಧ ಎಂದರು.
ಕೀ ಸ್ಟೋನ್ ಎಕ್ಸ್‌ಎಲ್ ಯೋಜನೆಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2015 ರಲ್ಲಿ ತಿರಸ್ಕರಿಸಿದ್ದರು. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2017 ರಲ್ಲಿ ಪೈಪ್ಲೈನ್ ಯೋಜನೆ ನಿರ್ಮಿಸಲು ಅನುಮತಿ ನೀಡಿದ್ದರು.