ವಾಷಿಂಗ್ಟನ್: ವಲಸೆ ನೀತಿಗೆ ಸಂಬಂಧಿಸಿದ ಮೂರು ಕಾರ್ಯನಿರ್ವಾಹಕ ಆದೇಶಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಸಹಿ ಹಾಕಲಿದ್ದಾರೆ.
ಟ್ರಂಪ್ ಅವರ ನೀತಿಗಳಿಂದ ಗಡಿಯಲ್ಲಿ ಬೇರ್ಪಟ್ಟಿದ್ದ ಕುಟುಂಬಗಳನ್ನು ಮತ್ತೆ ಒಂದುಗೂಡಿಸಲು ಕಾರ್ಯಪಡೆ ರಚಿಸುವುದು. ವಲಸೆ ವ್ಯವಸ್ಥೆಯು ನ್ಯಾಯಯುತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ವಲಸೆ ಕುರಿತ ಮೂರು ಆದೇಶಗಳಿಗೆ ಸಹಿ ಹಾಕಲಿದ್ದಾರೆ.
ಓದಿ: Watch: ಪೂರ್ವ ಅಮೆರಿಕದಲ್ಲಿ ಭಾರಿ ಹಿಮಪಾತ; ಸಾರಿಗೆ ಅಸ್ತವ್ಯಸ್ತ, ಶಾಲೆಗಳು ಬಂದ್
ಒಂದು ರಾಷ್ಟ್ರವಾಗಿ ನಾವು ಏನು ಎಂಬುದನ್ನು ವಲಸಿಗರಿಗೆ ತಿಳಿಸಲು ಇವು ಅತ್ಯಗತ್ಯ ಮತ್ತು ಭವಿಷ್ಯದ ಅಮೆರಿಕದ ಆಕಾಂಕ್ಷೆಗಳಿಗೆ ನಿರ್ಣಾಯಕವಾಗಿದೆ ಎಂದು ಬೈಡನ್ ನಂಬಿದ್ದರಿಂದ ಈ ಮೂರು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ಶ್ವೇತಭವನ ಹೇಳಿದೆ.