ETV Bharat / international

ಟ್ರಂಪ್​ ನಿಯಮ 'ಮುಸ್ಲಿಂ ಪ್ರಯಾಣ ನಿಷೇಧ'ಕ್ಕೆ ಅಂತ್ಯ ಹಾಡಿದ ಬೈಡನ್​

author img

By

Published : Jan 21, 2021, 11:03 AM IST

ಟ್ರಂಪ್​ ಸರ್ಕಾರ ಜಾರಿಗೆ ತಂದಿದ್ದ 'ಮುಸ್ಲಿಂ ಪ್ರಯಾಣ ನಿಷೇಧ' ಕಾನೂನುಗಳು ಸೇರಿ ಹಲವಾರು ಕಾರ್ಯನಿರ್ವಾಹಕ ಆದೇಶಗಳಿಗೆ ಯುಎಸ್ ನೂತನ ಅಧ್ಯಕ್ಷ ಜೋ ಬೈಡನ್ ಅಂತ್ಯ ಹಾಡಿದ್ದಾರೆ.

Biden
ಜೋ ಬಿಡನ್

ವಾಷಿಂಗ್ಟನ್ (ಯುಎಸ್): ವಲಸೆಯನ್ನು ಸೀಮಿತಗೊಳಿಸುವ ಡೊನಾಲ್ಡ್ ಟ್ರಂಪ್ ಅವರ ಕ್ರಮಕ್ಕೆ ತಿರುಗೇಟು ನೀಡಿರುವ ಅಮೆರಿಕೆ ನೂತನ ಅಧ್ಯಕ್ಷ ಜೋ ಬೈಡನ್ 'ಮುಸ್ಲಿಂ ಪ್ರಯಾಣ ನಿಷೇಧ'ವನ್ನು ಕೊನೆಗೊಳಿಸಿದ್ದಾರೆ. ಇದು ಹಲವಾರು ಮುಸ್ಲಿಂ ಮತ್ತು ಆಫ್ರಿಕನ್ ದೇಶಗಳಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸುವವರಿಗೆ ಸಹಕಾರಿಯಾಗಲಿದೆ.

ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಬೈಡನ್ 17 ಕಾರ್ಯನಿರ್ವಾಹಕ ಆದೇಶಗಳ ಜ್ಞಾಪಕ ಪತ್ರಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಮುಸ್ಲಿಂ ಪ್ರಯಾಣ ನಿಷೇಧವನ್ನು ಕೊನೆಗೊಳಿಸುವುದು ಸೇರಿದೆ.

ಪೀಡಿತ ದೇಶಗಳ ವ್ಯಕ್ತಿಗಳಿಗೆ ವೀಸಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಮತ್ತು ನಿಷೇಧದಿಂದಾಗಿ ಯುನೈಟೆಡ್ ಸ್ಟೇಟ್ಸ್​ಗೆ ಆಗುವ ನಷ್ಟದ ಬಗ್ಗೆ ಪರಿಶೀಲಿಸಿ, ಅದನ್ನು ಪರಿಹರಿಸುವ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಅವರು ರಾಜ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲಿ ಅಂದರೆ 2017ರಲ್ಲಿ ಜಾರಿಗೆ ಬಂದ ಮುಸ್ಲಿಂ ಪ್ರಯಾಣ ನಿಷೇಧವು ಆರಂಭದಲ್ಲಿ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪ್ರಯಾಣವನ್ನು ನಿರ್ಬಂಧಿಸಿದೆ. ಅದರಲ್ಲಿ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ಈ ರಾಷ್ಟ್ರಗಳಿಂದ ಬರುವವರಿಗೆ ನಿಷೇಧ ಹೇರಲಾಗಿತ್ತು. ನಿಷೇಧವು ಹಲವಾರು ಕಾನೂನು ಸವಾಲುಗಳನ್ನು ಎದುರಿಸಿತ್ತು. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ಅಂತಿಮ ಆವೃತ್ತಿಯನ್ನು ಎತ್ತಿಹಿಡಿದಿದೆ. ಮುಸ್ಲಿಂ ಪ್ರಯಾಣ ನಿಷೇಧವು ಇರಾನ್, ಲಿಬಿಯಾ, ಸಿರಿಯಾ, ಯೆಮೆನ್, ಸೊಮಾಲಿಯಾ, ನೈಜೀರಿಯಾ, ಮ್ಯಾನ್ಮಾರ್, ಎರಿಟ್ರಿಯಾ, ಕಿರ್ಗಿಸ್ತಾನ್, ಸುಡಾನ್, ಟಾಂಜಾನಿಯಾ ಮತ್ತು ಉತ್ತರ ಕೊರಿಯಾಗೆ ಸೀಮಿತವಾಗಿತ್ತು.

ಮತ್ತೊಂದು ಕಾರ್ಯನಿರ್ವಾಹಕ ಆದೇಶವು ಜನಗಣತಿ ಎಣಿಕೆಯಿಂದ ನಾಗರಿಕರಲ್ಲದವರನ್ನು ಹೊರಗಿಡುವ ಟ್ರಂಪ್ ಆಡಳಿತದ ಯೋಜನೆಯನ್ನು ಹಿಂತೆಗೆದುಕೊಂಡಿದೆ. ಮೆಕ್ಸಿಕೊದೊಂದಿಗೆ ಟ್ರಂಪ್‌ ನಿರ್ಮಾಣ ಮಾಡಲು ಆದೇಶಿಸಿದ್ದ ಗಡಿ ಗೋಡೆಯ ನಿರ್ಮಾಣವನ್ನೂ ಬೈಡನ್ ನಿಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.