ETV Bharat / international

ಟ್ರಂಪ್​​​ ಸೋಲಿಸಲು ಬಿಡೆನ್ ಹೊಸ ದಾಳ​: ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್​ ಆಯ್ಕೆ

ಸೆನೆಟರ್​ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಬಿಡೆನ್​ ಜೊತೆ ಅವರೂ ಮುಖ್ಯ ಚುನಾವಣಾ ಪ್ರಚಾರಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕಪ್ಪು ಮಹಿಳೆಯೊಬ್ಬರನ್ನು ತಮ್ಮ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಬಿಡೆನ್​ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದ ಕಪ್ಪು ಜನರ ಮತಗಳನ್ನು ಆಕರ್ಷಿಸುವಲ್ಲಿ ಬಿಡೆನ್​ ನಿರ್ಧಾರ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

author img

By

Published : Aug 12, 2020, 12:46 PM IST

Updated : Aug 12, 2020, 1:31 PM IST

Kamala Harris
ಕಮಲಾ ಹ್ಯಾರಿಸ್

ವಿಲ್ಮಿಂಗ್ಟನ್(ಅಮೆರಿಕ): ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸೋಲಿಸಲು ಕಸರತ್ತು ನಡೆಸುತ್ತಿರುವ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್​, ಈಗ ಕಪ್ಪು ವರ್ಣೀಯರ ಮತಗಳನ್ನು ಸೆಳೆಯಲು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್​ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಪಕ್ಷ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಬಿಡೆನ್​ ನೇಮಕ ಮಾಡಿದ್ದಾರೆ. ಈ ಮೂಲಕ ಕಪ್ಪು ಮಹಿಳೆಯೊಬ್ಬರನ್ನು ನೇಮಿಸಿ ಬಿಡೆನ್​ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ದೇಶದ ಪ್ರಭಾವಿ ನಾಯಕನಾಗಿರುವ ಡೊನಾಲ್ಡ್​ ಟ್ರಂಪ್​ರನ್ನು ಸೋಲಿಸುವ ಸಲುವಾಗಿ ದೇಶದ ಕಪ್ಪು ಜನರ ಮತಗಳನ್ನು ಆಕರ್ಷಿಸುವಲ್ಲಿ ಬಿಡೆನ್​ ನಿರ್ಧಾರ ಬಹಳಷ್ಟು ಮಹತ್ವ ಪಡೆದಿದೆ.

2017ರಿಂದಲೂ ಡೆಮಾಕ್ರೆಟಿಕ್​ ಪಕ್ಷದಿಂದ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್​ ಆಗಿರುವ ಕಮಲಾ ಹ್ಯಾರಿಸ್, ಪಕ್ಷದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಅಮೆರಿಕ ಸೆನೆಟ್​ನಲ್ಲಿ ಸೇವೆ ಸಲ್ಲಿಸಿದ ಭಾರತ ಮೂಲದ ಮೊದಲ ಅಮೆರಿಕ ಪ್ರಜೆ ಎಂಬ ಖ್ಯಾತಿ ಕಮಲಾ ಅವರದ್ದು. 55 ವರ್ಷದ ಕಮಲಾ ಹ್ಯಾರಿಸ್​, ಪ್ರಭಾವಿ ಕಪ್ಪು ಮಹಿಳೆಯಾಗಿ ಅಮೆರಿಕ ರಾಜಕೀಯದಲ್ಲಿ ಖ್ಯಾತರು. ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಪ್ರಚಾರದ ಕಠಿಣತೆ ಅರಿತಿರುವ ಬಿಡೆನ್, ಕಪ್ಪು ಜನರನ್ನು ಆಕರ್ಷಿಸುವ ಸಲುವಾಗಿ ಕಮಲಾ ಹ್ಯಾರಿಸ್ ಅವರನ್ನು ನೇಮಿಸಿದ್ದಾರೆ

ಡೆಲವೇರ್​ನ ವಿಲ್ಮಿಂಗ್ಟನ್​ನಲ್ಲಿರುವ ಬಿಡೆನ್​ ನಿವಾಸದ ಸಮೀಪ ಬುಧವಾರ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಕಮಲಾ ಹ್ಯಾರಿಸ್ ಮೊದಲ ಬಾರಿಗೆ ಬಿಡೆನ್ ಅವರೊಂದಿಗೆ ಪ್ರಚಾರಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಬಿಡೆನ್, ಹ್ಯಾರಿಸ್​ರನ್ನು ಹಾಡಿ ಹೊಗಳಿದ್ದಾರೆ. ಕಮಲಾ ನಿರ್ಭೀತ ಹೋರಾಟಗಾರ್ತಿ ಮತ್ತು ದೇಶದ ಅತ್ಯುತ್ತಮ ಸಾರ್ವಜನಿಕ ಸೇವಕರಲ್ಲಿ ಒಬ್ಬರು ಎಂದು ಬಿಡೆನ್​ ಬಣ್ಣಿಸಿದ್ದಾರೆ. ಇನ್ನೊಂದೆಡೆ ಬಿಡೆನ್​ರ ಗುಣಗಾನ ಮಾಡಿರುವ ಹ್ಯಾರಿಸ್​, ಬಿಡೆನ್​ ಅಮೆರಿಕ ಜನರನ್ನು ಏಕೀಕರಿಸುತ್ತಾರೆ ಮತ್ತು ನಮ್ಮ ಆದರ್ಶಗಳಿಗೆ ತಕ್ಕಂತೆ ಜೀವಿಸುವ ಅಮೆರಿಕವನ್ನು ನಿರ್ಮಿಸುತ್ತಾರೆ ಎಂದು ಕೊಂಡಾಡಿದ್ದಾರೆ.

ಮುಂಬರುವ ನವೆಂಬರ್​ ತಿಂಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಡೆಮಾಕ್ರೆಟಿಕ್​ ಪಕ್ಷದಿಂದ ಜೋ ಬಿಡೆನ್​ ಸ್ಪರ್ಧಿಸುತ್ತಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಿಪಬ್ಲಿಕನ್​ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ.

Last Updated : Aug 12, 2020, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.