ETV Bharat / international

‘ಉತ್ತಮ ಜನರ ತಂಡ’: ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್​ ಹೊಗಳಿದ ಬಿಲ್ ​ಗೇಟ್ಸ್​​ - ಕೊರೊನಾ ಲಸಿಕೆ

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್ ಅಮೆರಿಕದ ನಿಯೋಜಿತ ಅಧ್ಯಕ್ಷರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರ ತಂಡವು ಜನರ ಆರೋಗ್ಯದ ಪರ ಕೆಲಸ ಮಾಡುವ ಉತ್ತಮ ಜನರ ಗುಂಪಾಗಿದೆ ಎಂದಿದ್ದಾರೆ.

Microsoft co-founder Bill Gates
ಮೈಕ್ರೋಸಾಫ್ಟ್​​ ಸಂಸ್ಥಾಪಕ ಬಿಲ್​​​ಗೇಟ್ಸ್
author img

By

Published : Nov 20, 2020, 10:09 AM IST

ನ್ಯೂಯಾರ್ಕ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್​ರನ್ನು ​​ಮೈಕ್ರೋಸಾಫ್ಟ್​​ ಸಂಸ್ಥಾಪಕ ಬಿಲ್ ​​​ಗೇಟ್ಸ್ ಹಾಡಿ ಹೊಗಳಿದ್ದಾರೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೆ ಬೈಡನ್ ಹಾಗೂ ಕಮಲಾ ಹ್ಯಾರಿಸ್ ತಂಡದಲ್ಲಿ ಹೊರಗಿನವರು ಯಾರು ಇಲ್ಲದೆ ‘ಉತ್ತಮ ಜನರ ತಂಡವಾಗಿದೆ’ ಎಂದು ಬಣ್ಣಿಸಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬೈಡನ್ ಜೊತೆಗಿನ ತಂಡವು ಜನರ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ಹೊಂದಿರುವ ಗುಂಪಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಲ್ಲದೆ ಕೋವಿಡ್ ಬಗ್ಗೆ ಪ್ರತಿಕ್ರಿಯಿಸಿ ಇಂಗ್ಲೆಂಡ್​ನಲ್ಲಿ ಅಸ್ಟ್ರಾಜೆನೆಕಾ ಎಂಬ ಸಂಸ್ಥೆ ಇನ್ನೇನು ಕೆಲವೇ ಸಮಯದಲ್ಲಿ ವ್ಯಾಕ್ಸಿನ್​​ಗೆ ಅನುಮೋದನೆ ಪಡೆಯಲಿದೆ. ನೊವಾವಾಕ್ಸ್​​ ಮತ್ತು ಜಾನ್ಸ​ನ್ ಮತ್ತು ಜಾನ್ಸನ್ ಸಂಸ್ಥೆಯ​ ಅನುಮೋದನೆಗಳು ಮುಂದಿನ ವರ್ಷದ ಆರಂಭದಲ್ಲಿಯೇ ಆಗಲಿದೆ ಎಂದಿದ್ದಾರೆ.

ಈ ವ್ಯಾಕ್ಸಿನ್​ಗಳು ಜಾಗತಿಕವಾಗಿ ತಲುಪಲಿವೆ ಹಾಗೂ ಲಸಿಕೆ ಕುರಿತ ಈ ಬೆಳವಣಿಗೆ ಭರವಸೆ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.