ETV Bharat / international

ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುವುದಿಲ್ಲ: ಜೋ ಬೈಡನ್ - ರಷ್ಯಾ ಬಗ್ಗೆ ಜೋ ಬೈಡನ್ ಪ್ರತಿಕ್ರಿಯೆ

ತಾಲಿಬಾನ್‌ನ ಅಸಮರ್ಥತೆಯ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನನಗೆ ಬೇಸರವಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

Biden defends Afghanistan withdrawal, says 'I make no apologies for what I did'
ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಂಡದ್ದಕ್ಕೆ ಕ್ಷಮೆ ಕೇಳುವುದಿಲ್ಲ: ಜೋ ಬೈಡನ್
author img

By

Published : Jan 20, 2022, 6:41 AM IST

ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಭದ್ರತಾ ಪಡೆಗಳನ್ನು ವಾಪಸ್ ಕರೆದುಕೊಂಡ ವಿಚಾರದ ಬಗ್ಗೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಡನ್ 20 ವರ್ಷಗಳ ನಂತರ ಅಫ್ಘಾನಿಸ್ತಾನದಿಂದ ಹೊರಬರಲು ಬೇರೆ ಯಾವುದೇ ಮಾರ್ಗ ಇರಲಿಲ್ಲ. ಯಾವಾಗ ಪ್ರಶ್ನೆ ಮಾಡಿದರೂ, ನಾನು ಆ ಕುರಿತು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.

ತೆಗೆದುಕೊಂಡ ನಿರ್ಧಾರ ಸರಿಯಾಗೇ ಇದೆ

ತಾಲಿಬಾನ್‌ನ ಅಸಮರ್ಥತೆಯ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನನಗೆ ಬೇಸರವಾಗುತ್ತಿದೆ. ನಮ್ಮ ವಿರುದ್ಧ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಅಫ್ಘಾನಿಸ್ತಾನ ನಾಗರಿಕರ ಬಗ್ಗೆ ಕಳಕಳಿಯಿದೆ ಎಂದು ಬೈಡನ್ ಹೇಳಿದ್ದಾರೆ.

ಒಂದು ವೇಳೆ ನಾವು ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಂಡಿದ್ದರೆ, ಮತ್ತೆ 25 ಸಾವಿರದಿಂದ 50 ಸಾವಿರ ಸೈನಿಕರನ್ನು ನಿಯೋಜನೆ ಮಾಡಲು ಕೇಳಿಕೊಳ್ಳಲಾಗುತ್ತಿತ್ತು ಎಂದು ಬೈಡನ್ ಹೇಳಿದ್ದಾರೆ.

ಚೀನಾ ಜತೆ ವ್ಯಾಪಾರದ ಮಾತು

ಚೀನಾದ ವಸ್ತುಗಳ ಆಮದು ಮೇಲಿನ ಸುಂಕವನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೈಡನ್ ಹೇಳುತ್ತಾರೆ, ನಮ್ಮ ವ್ಯಾಪಾರ ಪ್ರತಿನಿಧಿಗಳು ಈ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ರಷ್ಯಾಗೆ ಎಚ್ಚರಿಕೆ ಕೊಟ್ಟ ಬೈಡನ್​

ಉಕ್ರೇನ್ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ 600 ಮಿಲಿಯನ್ ಡಾಲರ್​ ಮೌಲ್ಯದ ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ಉಕ್ರೇನ್​​​ಗೆ ರವಾನಿಸಿದ್ದೇನೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ರಷ್ಯಾ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ರಷ್ಯಾದ ನಡೆ ಮುಂದುವರೆದರೆ, ನಿರ್ಬಂಧ ವಿಧಿಸಲಾಗುತ್ತದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 1993ರ ಮುಂಬೈ ಸ್ಫೋಟದ ಅಪರಾಧಿಗೆ ಪಾಕ್‌ 5 ಸ್ಟಾರ್‌ ಆತಿಥ್ಯ; ವಿಶ್ವಸಂಸ್ಥೆಯಲ್ಲಿ ಭಾರತ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.