ವಾಷಿಂಗ್ಟನ್ (ಅಮೆರಿಕ): ಸುಮಾರು ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಪಹರಿಸಲಾಗಿದ್ದ ಯುಎಸ್ ನೌಕಾಪಡೆಯ ಅನುಭವಿ ಮಾರ್ಕ್ ಫ್ರೆರಿಚ್ಸ್ ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭಾನುವಾರ ಕರೆ ನೀಡಿದ್ದಾರೆ.
ಲೊಂಬಾರ್ಡ್‌ನ ಸಿವಿಲ್ ಇಂಜಿನಿಯರ್ ಮತ್ತು ಗುತ್ತಿಗೆದಾರ ಫ್ರೆರಿಚ್ಸ್ ಅವರನ್ನು ಜನವರಿ 2020 ರಲ್ಲಿ ಕಾಬೂಲ್‌ನಲ್ಲಿ ಅಪಹರಿಸಲಾಗಿತ್ತು. ಅವರು ತಾಲಿಬಾನ್ ಸಂಬಂಧಿತ ಹಕ್ಕಾನಿ ಜಾಲದ ವಶದಲ್ಲಿದ್ದಾರೆ ಎಂದು ನಂಬಲಾಗಿದೆ.
ಅಮೆರಿಕನ್ನರು ಅಥವಾ ಯಾವುದೇ ಮುಗ್ಧ ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕುವುದು ಸ್ವೀಕಾರಾರ್ಹವಲ್ಲ. ಮುಗ್ಧರನ್ನು ಒತ್ತೆಯಾಳಾಗಿಟ್ಟುಕೊಳ್ಳುವುದು ಅಪರಾಧ ಮತ್ತು ಹೇಡಿತನದ ಕೃತ್ಯವಾಗಿದೆ. ನಾವು ತಾಲಿಬಾನ್ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮೊದಲು ತಕ್ಷಣವೇ ಮಾರ್ಕ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ