ಕ್ವಿಟೊ( ಈಕ್ವೆಡಾರ್) : ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಜಗಳದಿಂದಾಗಿ 75 ಮಂದಿ ಸಾವಿಗೀಡಾದ ಘಟನೆ ಈಕ್ವಡಾರ್ನ ಕಾರಾಗೃಹದಲ್ಲಿ ನಡೆದಿದೆ.
ಜೈಲು ನಿರ್ದೇಶಕ ಈ ಬಗ್ಗೆ ಮಾಹಿತಿ ನೀಡಿದ್ದು, 800 ಕಚೇರಿಗಳಿಂದ ಹಿಂಸಾಚಾರ ನಿಯಂತ್ರಣ ಮಾಡಲು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಹತೋಟಿಗೆ ತರಲು ಸಹಕಾರ ನೀಡುತ್ತಿದ್ದಾರೆ ಎಂದಿದ್ದಾರೆ. ಸೋಮವಾರ ತಡರಾತ್ರಿ ಈ ಘರ್ಷಣೆ ನಡೆದಿದೆ. ಜೈಲಿನಲ್ಲಿ ಆದ ಹಿಂಸಾಚಾರ ನಿಯಂತ್ರಣಕ್ಕೆ ನೂರಾರು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಕಾರಾಗೃಹದ ನಿರ್ದೇಶಕರು ತಿಳಿಸಿದ್ದಾರೆ.
ಎರಡು ಗುಂಪುಗಳ ನಡುವೆ ನಾಯಕತ್ವಕ್ಕಾಗಿ ಈ ಮಾರಾಮಾರಿ ನಡೆದಿದ್ದು, ಶಸ್ತ್ರಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿದ್ದರಿಂದ ಈ ಘಟನೆ ನಡೆದಿದೆ. ಇನ್ನು ಕೆಲವರು ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈಕ್ವೆಡಾರ್ನ ಕಾರಾಗೃಹದಲ್ಲಿ ಇಂತಹ ಹಿಂಸಾಚಾರ ಪ್ರಕರಣಗಳು ಸಾಮಾನ್ಯ ಎಂಬಂತೆ ವರದಿಯಾಗುತ್ತಿವೆ. 27,000 ಕೈದಿಗಳಿಗಾಗಿ ವಿನ್ಯಾಸಗೊಳಿಸಿರುವ ಕಾರಾಗೃಹದಲ್ಲಿ ಸುಮಾರು 38,000 ಮಂದಿ ವಾಸಿಸುತ್ತಿದ್ದಾರೆ.