ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ಲಂಡನ್‌ನಲ್ಲಿ ದೌರ್ಜನ್ಯ ಪ್ರಕರಣವೊಂದರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಸಾಂಜ್ ಪತ್ನಿ ಸ್ಟೆಲ್ಲಾ ಮೊರೀಸ್ ತಿಳಿಸಿದ್ದಾರೆ.
ತಮ್ಮ ಪತಿಯನ್ನು ಇಟ್ಟಿರುವ ಜೈಲು ಅತ್ಯಂತ ಅಪಾಯಕಾರಿಯಾಗಿದೆ. ಅಸಾಂಜ್ ಇರುವ ಬ್ಲಾಕ್ ಮೂವರು ಕೈದಿಗಳಿಗೆ ಕೋವಿಡ್-19 ಪಾಸಿಟಿವ್ ಇದೆ. ಹತ್ಯೆಗಳನ್ನು ಮಾಡಿರುವ ಹಾಗೂ ಗಂಭೀರವಾದ ಪ್ರಕರಣಗಳಲ್ಲಿನ ಕ್ರಿಮಿನಲ್‌ಗಳು ಇರುವ ಸೆಲ್‌ನಲ್ಲಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಸಾಂಜೆ ಆಸ್ಟ್ರೇಲಿಯಾದ ನಾಗರಿಕ ಎಂದು ಅಮೆರಿಕಾದ ಪ್ರಾಸಿಕ್ಯೂಟರ್ ಕೋರ್ಟ್‌ನಲ್ಲಿಂದು ವಾದಿಸಿದ್ದಾರೆ. ದಶಕದ ಹಿಂದೆ ಅಮೆರಿಕಾದ ಸೇನಾ ಮಾಹಿತಿಯನ್ನು ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿರುವ ಆರೋಪ ಸೇರಿದಂತೆ 17 ಬೇಹುಕಾರಿಕೆ ಪ್ರಕರಣಗಳು ಅಸಾಂಜ್ ಮೇಲಿವೆ. ಇದರಲ್ಲಿ ಕಂಪ್ಯೂಟರ್ ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ.
ತಮ್ಮ ಪತಿ ಸತ್ಯವಾದ ಮಾಹಿತಿಯನ್ನು ಪ್ರಕಟಮಾಡಲು ಪ್ರಯತ್ನಿಸಿದ್ದಾರೆ ಆದರೆ ಸರ್ಕಾರ ಅವರಿಗೆ ಇನ್ನಿಲ್ಲದ ಹಿಂಸೆ ನೀಡಿ ನಿಂದಿಸಿದೆ ಎಂದು ಮೊರೀಸ್ ಅವರು ಆರೋಪಿಸಿದ್ದಾರೆ. ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.