ನ್ಯೂಯಾರ್ಕ್: ನಿನ್ನೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ವಲ್ಪ ಹೊತ್ತು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. 60 ವರ್ಷದ ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ಕಚೇರಿ ಮುಂಭಾಗ ನಿಂತುಕೊಂಡಿದ್ದು, ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
-
Man with a gun in front of the UN #BREAKING #NYC #NYPD #UnitedNations #HappeningNow #UN pic.twitter.com/IMj1Bw7Hdb
— Fahad Aldoseri (@FahadDhimself) December 2, 2021 " class="align-text-top noRightClick twitterSection" data="
">Man with a gun in front of the UN #BREAKING #NYC #NYPD #UnitedNations #HappeningNow #UN pic.twitter.com/IMj1Bw7Hdb
— Fahad Aldoseri (@FahadDhimself) December 2, 2021Man with a gun in front of the UN #BREAKING #NYC #NYPD #UnitedNations #HappeningNow #UN pic.twitter.com/IMj1Bw7Hdb
— Fahad Aldoseri (@FahadDhimself) December 2, 2021
ಈ ಘಟನೆ ಬೆನ್ನಲ್ಲೇ ಹಲವಾರು ಗಂಟೆಗಳ ಕಾಲ ಯುಎನ್ ಕಚೇರಿಯನ್ನು ಲಾಕ್ಡೌನ್ ಮಾಡಲಾಗಿತ್ತು. ತಕ್ಷಣವೇ ತುರ್ತು ಸೇವೆಗಳ ಘಟಕ, ಬಾಂಬ್ ಸ್ಕ್ವಾಡ್ ಕಾರ್ಯಪ್ರವೃತ್ತವಾಯಿತು. ಆದರೆ ಯಾವುದೇ ಅವಘಡ ಸಂಭವಿಸಲಿಲ್ಲ. ಆ ವ್ಯಕ್ತಿ ಒಬ್ಬನೇ ಮಾತನಾಡಿಕೊಳ್ಳುತ್ತಾ ಇದ್ದು, ತನಗೆ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ಗೆ ಐಎಂಎಫ್ನಲ್ಲಿ ಬಡ್ತಿ
ಆ ವ್ಯಕ್ತಿ ತಿರುಗಾಡುತ್ತಿದ್ದ, ಯುಎನ್ ಪ್ರಧಾನ ಕಚೇರಿಯ ಹೊರಗಿನ ರಸ್ತೆಯನ್ನು ಪೊಲೀಸರು ಸುತ್ತುವರಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.