ಸ್ಯಾನ್ಫ್ರಾನ್ಸಿಸ್ಕೋ (ಅಮೆರಿಕ): ನೂತನ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆ್ಯಪಲ್ ಐಫೋನ್ ತನ್ನ ಆ್ಯಪ್ ಸ್ಟೋರ್ನಿಂದ ಈವರೆಗೆ ಸುಮಾರು 47 ಸಾವಿರ ಆ್ಯಪ್ಗಳನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ ಕೆಲವು ವರ್ಷಗಳಿಂದ ಚೀನಾ ಅಮೆರಿಕದ ನಿಯಮಗಳನ್ನು ಗಾಳಿಗೆ ತೂರಿದ್ದು, ಈ ಆ್ಯಪ್ಗಳನ್ನು ಬ್ಯಾನ್ ಮಾಡಲು ಕಾರಣವಾಗಿದೆ. ಚೀನಾದಲ್ಲಿ ಆ್ಯಪಲ್ ಕಂಪನಿ ಆ್ಯಪ್ ಸ್ಟೋರ್ ಮತ್ತು ಇತರ ಸೇವೆಗಳನ್ನು ನೀಡುತ್ತಿದ್ದು, ಅಮೆರಿಕದ ಅನುಮತಿಯಿಲ್ಲದೇ ಚೀನಾದಲ್ಲಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಸುದ್ದಿಮೂಲವೊಂದು ಮಾಹಿತಿ ನೀಡಿತ್ತು.
ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಮೂಲದ ಟಿಕ್ ಟಾಕ್ ಹಾಗೂ ವಿಚಾಟ್ ಅಪ್ಲಿಕೇಷನ್ಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಜೊತೆಗೆ ಚೀನಾ ಮೂಲದ ಹ್ಯುವಾವೆ ಮೊಬೈಲ್ ಕಂಪನಿಯ ವಿರುದ್ಧ ನಿಯಮಗಳನ್ನು ಬಿಗಿ ಗೊಳಿಸಿದ್ದರು.
ಈಗ ಸದ್ಯಕ್ಕೆ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪದಲ್ಲಿ ಐಫೋನ್ ಆ್ಯಪ್ ಸ್ಟೋರ್ನಿಂದ ಚೀನಾ ಮೂಲದ ಒಟ್ಟು 47 ಸಾವಿರ ಅಪ್ಲಿಕೇಷನ್ಗಳನ್ನು ತೆಗೆದುಹಾಕಿದೆ. ಇದರಲ್ಲಿ 4,500 ಮೊಬೈಲ್ ಗೇಮ್ಗಳು ಕೂಡಾ ಸೇರ್ಪಡೆಯಾಗಿವೆ.
ಅಂಕಿ ಅಂಶಗಳ ಪ್ರಕಾರ ಆ್ಯಪ್ ಸ್ಟೋರ್ನಲ್ಲಿ ವರ್ಷಕ್ಕೆ 16.4 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಆ್ಯಪಲ್ನ ಈ ಕ್ರಮದಿಂದ ಭಾರಿ ನಷ್ಟ ಉಂಟಾಗುವ ಸಾಧ್ಯತೆಯಿದೆ.