ETV Bharat / international

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ 2ನೇ ಅವಧಿಗೆ ಮರು ನೇಮಕ - ವಿಶ್ವಸಂಸ್ಥೆ

ಆಂಟೋನಿಯೊ ಗುಟೆರೆಸ್ ಸತತ ಎರಡನೇ ಬಾರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ. ಅವರ 2ನೇ ಅವಧಿ 2026ರ ಡಿಸೆಂಬರ್ 31 ರಂದು ಕೊನೆಗೊಳ್ಳಲಿದೆ.

antonio-guterres-re-elected-as-un-secretary-general
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ 2ನೇ ಅವಧಿಗೆ ನೇಮಕ
author img

By

Published : Jun 18, 2021, 9:25 PM IST

ನವದೆಹಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಸತತ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. 5 ವರ್ಷಗಳ ಇವರ ಎರಡನೇ ಅವಧಿ ಜನವರಿ 1, 2022 ರಿಂದ ಪ್ರಾರಂಭವಾಗಿ 2026 ರ ಡಿಸೆಂಬರ್ 31 ರಂದು ಕೊನೆಗೊಳ್ಳುತ್ತದೆ.

193 ಸದಸ್ಯರ ವಿಶ್ವಸಂಸ್ಥೆಯಲ್ಲಿ ಮರುಚುನಾವಣೆಗೆ ಭದ್ರತಾ ಮಂಡಳಿ ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಅಧ್ಯಕ್ಷ ವೊಲ್ಕಾನ್ ಬೊಜ್ಕಿರ್, ಗುಟೆರೆಸ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತೆ ನೇಮಕ ಮಾಡಲಾಗಿದೆಯೆಂದು ಘೋಷಿಸಿದ್ದಾರೆ. ಸಾಮಾನ್ಯ ಅಧಿವೇಶನದ ಸಭಾಂಗಣದ ವೇದಿಕೆಯಲ್ಲಿ 72 ವರ್ಷದ ಗುಟೆರೆಸ್ 2ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಇದಕ್ಕೂ ಮೊದಲು ಜೂನ್ 8 ರಂದು 15 ಸದಸ್ಯರ ಕೌನ್ಸಿಲ್ ಸಭೆ ಸರ್ವಾನುಮತದ ಗುಟೆರೆಸ್ ಅವರ ಹೆಸರನ್ನು ಶಿಫಾರಸು ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.