ETV Bharat / international

ಅಮೆರಿಕನ್ನರ ಹೊಸ ಹೀರೊ ಡಾ. ಅಂಥೋನಿ ಫೌಸಿ!

ಡಾ. ಅಂಥೋನಿ ಫೌಸಿ ವೃತ್ತಿಯಿಂದ ಒಬ್ಬ ವೈದ್ಯ ಹಾಗೂ ರೋಗನಿರೋಧಕ ತಜ್ಞರಾಗಿದ್ದು, ಅಮೆರಿಕದ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನ್ಯಾಷನಲ್ ಇನ್​ಸ್ಟಿಟ್ಯೂಟ್​ನ (NIAID) ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಅಮೆರಿಕ ನೋಡಿದ ಪ್ರತಿಯೊಂದು ಆರೋಗ್ಯ ವ್ಯವಸ್ಥೆಯ ಸಂಕಷ್ಟ ನಿವಾರಿಸುವಲ್ಲಿ ಫೌಸಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್​ಐವಿ, ಸಾರ್ಸ್​, ಎಬೋಲಾ, ಮರ್ಸ್​ ಮತ್ತು 2001ರ ಜೈವಿಕ ಭಯೋತ್ಪಾದನೆ ದಾಳಿಯ ಸಂದರ್ಭಗಳಲ್ಲಿ ಫೌಸಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ.

ANTHONY FAUCI
ANTHONY FAUCI
author img

By

Published : Apr 7, 2020, 1:47 PM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಧ್ಯಮ ಗೋಷ್ಠಿಗಳಲ್ಲಿ ಮಾತನಾಡುತ್ತಿರುವಾಗ ಅವರ ಹಿಂದೆ ತೆಳ್ಳನೆಯ ವ್ಯಕ್ತಿಯೊಬ್ಬ ನಿಂತುಕೊಂಡಿರುವುದನ್ನು ನೀವು ಗಮನಿಸಿರಬಹುದು. ಅನೇಕ ಸಲ ಸಭೆಗಳಲ್ಲಿ, ಮಾಧ್ಯಮ ಗೋಷ್ಠಿಗಳಲ್ಲಿ ಅಧ್ಯಕ್ಷ ಟ್ರಂಪ್​ ಏನಾದರೂ ತಪ್ಪು ಮಾತನಾಡಿದರೆ ತಕ್ಷಣ ಪಕ್ಕಕ್ಕೆ ಬರುವ ಈ ವ್ಯಕ್ತಿ ಅಧ್ಯಕ್ಷರಿಗೆ ಸರಿಯಾದ ಮಾಹಿತಿಯನ್ನು ಹೇಳುತ್ತಾನೆ. ಅಧ್ಯಕ್ಷ ಟ್ರಂಪ್ ಕೂಡ ಸೌಜನ್ಯದಿಂದ ಈತನ ಸಲಹೆ ಸ್ವೀಕರಿಸಿ ಮುನ್ನಡೆಯುತ್ತಾರೆ. ಈ ವ್ಯಕ್ತಿಯೇ ಅಂಥೋನಿ ಫೌಸಿ. ಈಗ ಕೋವಿಡ್​-19 ಕುರಿತಂತೆ ಯಾವುದೇ ಮಾಹಿತಿ ಬೇಕಿದ್ದರೂ ಅಮೆರಿಕನ್ನರು ಇವರನ್ನೇ ಅವಲಂಬಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

ಡಾ. ಅಂಥೋನಿ ಫೌಸಿ ವೃತ್ತಿಯಿಂದ ಓರ್ವ ವೈದ್ಯ ಹಾಗೂ ರೋಗನಿರೋಧಕ ತಜ್ಞರಾಗಿದ್ದು, ಅಮೆರಿಕದ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನ್ಯಾಷನಲ್ ಇನ್​ಸ್ಟಿಟ್ಯೂಟ್​ನ (NIAID) ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಅಧ್ಯಕ್ಷ ರೋನಾಲ್ಡ್​ ರೇಗನ್​ರಿಂದ ಹಿಡಿದು ಈಗಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ವರೆಗೆ ಆರು ಅಧ್ಯಕ್ಷರ ಕೈಕೆಳಗೆ ಕೆಲಸ ಮಾಡಿರುವ ಅನುಭವ ಇವರಿಗಿದೆ. ಕಳೆದ ಮೂವತ್ತು ವರ್ಷಗಳಿಂದ ಅಮೆರಿಕ ನೋಡಿದ ಪ್ರತಿಯೊಂದು ಆರೋಗ್ಯ ವ್ಯವಸ್ಥೆಯ ಸಂಕಷ್ಟ ನಿವಾರಿಸುವಲ್ಲಿ ಫೌಸಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್​ಐವಿ, ಸಾರ್ಸ್​, ಎಬೋಲಾ, ಮರ್ಸ್​ ಮತ್ತು 2001ರ ಜೈವಿಕ ಭಯೋತ್ಪಾದನೆ ದಾಳಿಯ ಸಂದರ್ಭಗಳಲ್ಲಿ ಫೌಸಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ.

2014 ರಲ್ಲಿ ಅಮೆರಿಕದ ನರ್ಸ್​ ಒಬ್ಬರಿಗೆ ಎಬೋಲಾ ಸೋಂಕು ತಗುಲಿತ್ತು. ಆಗ ಅಮೆರಿಕದ ಒಬ್ಬೇ ಒಬ್ಬ ವೈದ್ಯನೂ ಆಕೆಗೆ ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ಆದರೆ 74 ವರ್ಷದ ಫೌಸಿ ಸುರಕ್ಷತಾ ಉಡುಪು ಧರಿಸಿ ಆಕೆಗೆ ಚಿಕಿತ್ಸೆ ನೀಡಲಾರಂಭಿಸಿದರು. ಕೆಲವೇ ವಾರಗಳಲ್ಲಿ ನರ್ಸ್​ ಎಬೋಲಾದಿಂದ ಸಂಪೂರ್ಣ ಗುಣಮುಖಳಾದಳು. ಮಾಧ್ಯಮಗಳ ಕ್ಯಾಮೆರಾಗಳ ಎದುರಿಗೆ ಆಕೆಯನ್ನು ತಬ್ಬಿಕೊಂಡ ಫೌಸಿ, ಎಬೋಲಾದಿಂದ ಸಮಾಜಕ್ಕೆ ಇನ್ನು ಯಾವುದೇ ಭೀತಿಯಿಲ್ಲ ಎಂಬ ಸಂದೇಶ ಸಾರಿದರು.

ಎಬೋಲಾ ಸಂಕಷ್ಟ ಕಳೆದು ಆರು ವರ್ಷಗಳ ನಂತರ ಫೌಸಿ ಈಗ ವೈಟ್​ ಹೌಸ್​ನ ಕೋವಿಡ್​-19 ಟಾಸ್ಕ್​ ಫೋರ್ಸ್​ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಸಾಕಷ್ಟು ಟೆಸ್ಟ್​ಗಳನ್ನು ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಸಂಸತ್ತಿನ ಮುಂದೆ ಧೈರ್ಯವಾಗಿ ಇವರು ಹೇಳಿದ್ದರು. ಅಮೆರಿಕದಲ್ಲಿ ಕೋವಿಡ್​ನಿಂದ ಸುಮಾರು 1 ಲಕ್ಷ ಜನ ಪ್ರಾಣ ಕಳೆದುಕೊಳ್ಳಬಹುದು ಎಂಬ ಫೌಸಿ ಅವರ ಅಂದಾಜಿಗೆ ಅಧ್ಯಕ್ಷ ಟ್ರಂಪ್​ ಕೂಡ ಒಪ್ಪಿದ್ದಾರೆ. ಮಲೇರಿಯಾ ವಾಸಿ ಮಾಡಲು ಬಳಸಲಾಗುವ ಔಷಧದಿಂದ ಕೋವಿಡ್​ ವಾಸಿ ಮಾಡಬಹುದು ಎಂದು ಟ್ರಂಪ್​ ಯಾವುದೋ ಉತ್ಸಾಹದಲ್ಲಿ ಹೇಳಿಬಿಟ್ಟಿದ್ದರು. ಆದರೆ ಈ ವಾದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಫೌಸಿ ತಕ್ಷಣ ಹೇಳಿ ಬಿಟ್ಟರು. ಹೀಗಿದ್ದಾರೆ ಡಾ. ಅಂಥೋನಿ ಫೌಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.