ETV Bharat / international

ಕಾಬೂಲ್ ಏರ್​ಪೋರ್ಟ್​ನಲ್ಲಿ 24-36 ಗಂಟೆಯಲ್ಲಿ ಮತ್ತೊಂದು ಉಗ್ರ ದಾಳಿ: ಬೈಡನ್ ಎಚ್ಚರಿಕೆ

ಕಾಬೂಲ್ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಮತ್ತು ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿಯ ಬೆದರಿಕೆ ಹೆಚ್ಚಾಗಿದೆ. ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಮ್ಮ ಕಮಾಂಡರ್‌ಗಳು ನನಗೆ ಮಾಹಿತಿ ನೀಡಿದರು ಎಂದು ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

author img

By

Published : Aug 29, 2021, 5:41 AM IST

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ಕಾಬೂಲ್ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಮತ್ತು ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿಯ ಬೆದರಿಕೆ ಹೆಚ್ಚಾಗಿದೆ. ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಮ್ಮ ಕಮಾಂಡರ್‌ಗಳು ನನಗೆ ಮಾಹಿತಿ ನೀಡಿದರು ಎಂದು ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಇಂದು ಬೆಳಿಗ್ಗೆ, ವಾಷಿಂಗ್ಟನ್‌ನಲ್ಲಿ ನನ್ನ ರಾಷ್ಟ್ರೀಯ ಭದ್ರತಾ ತಂಡ ಮತ್ತು ಕಮಾಂಡರ್‌ಗಳನ್ನು ಭೇಟಿಯಾದೆ. ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆ ISIS-K ವಿರುದ್ಧ ಅಮೆರಿಕಾ ಪಡೆಗಳು ಕಳೆದ ರಾತ್ರಿ ನಡೆಸಿದ ದಾಳಿ ಬಗ್ಗೆ ಚರ್ಚಿಸಿದ್ದೇನೆ. ನಮ್ಮ ಸೈನಿಕರು ಮತ್ತು ಕಾಬೂಲ್ ಮುಗ್ದ ಜನರ ಮೇಲಿನ ದಾಳಿಯ ಹೊಣೆಯನ್ನು ಒಪ್ಪಿಕೊಂಡ ಬಳಿಕ ನಾವು ಕಾರ್ಯಾಚರಣೆ ಇಳಿದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ.

ನಮ್ಮ ಈ ದಾಳಿ ಕೊನೆಯದಲ್ಲ. ಆ ಘೋರ ದಾಳಿಯಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ನಾವು ಬೇಟೆಯಾಡದೆ ಬಿಡಲ್ಲ. ನಮ್ಮ ದೇಶ ಮತ್ತು ಸೈನಿಕರಿಗೆ ಯಾರಾದ್ರೂ ಹಾನಿ ಮಾಡಿದ್ರೆ ನಾವು ಸುಮ್ಮನಿರಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಕಾಬೂಲ್‌ ಪರಿಸ್ಥಿತಿಯ ಮಧ್ಯೆಯೂ ನಾವು ನಾಗರಿಕರ ಸ್ಥಳಾಂತರ ಮುಂದುವರಿಸುತ್ತಿದ್ದೇವೆ. ನೂರಾರು ಅಮೆರಿಕನ್ನರು ಸೇರಿದಂತೆ 6,800 ಜನರನ್ನು ಶನಿವಾರ ಸ್ಥಳಾಂತರಿಸಿದ್ದೇವೆ ಎಂದು ತಿಳಿಸಿದರು.

ಗುರುವಾರ ಕಾಬೂಲ್​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ 60 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.