ETV Bharat / international

ಮಂಗಳ ಗ್ರಹದಲ್ಲಿ ಸರೋವರ ಪತ್ತೆ: ಅಮೆರಿಕ ಸಂಶೋಧಕರ ಅಧ್ಯಯನ - ಬ್ರೌನ್​ ವಿಶ್ವವಿದ್ಯಾಲಯ

ಮಂಗಳ ಗ್ರಹದಲ್ಲಿನ ಈ ಕುಳಿಗಳ ನೆಲವು ಹೊಳೆಯಂತಹ ಸ್ಪಷ್ಟವಾದ ಭೌಗೋಳಿಕ ಪುರಾವೆಗಳನ್ನು ಹೊಂದಿವೆ. ಆದರೆ ಹೊರಗಿನಿಂದ ಕುಳಿಗಳಿಗೆ ನೀರು ಪ್ರವೇಶಿಸಬಹುದಾದ ಒಳಹರಿವಿನ ಕಾಲುವೆಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಕೆಳಗಿನಿಂದ ಚಿಮ್ಮಬಹುದಾದ ಅಂತರ್ಜಲ ಚಟುವಟಿಕೆಯ ಬಗ್ಗೆಯೂ ಬಾಹ್ಯಾಕಾಶ ಸಂಶೋಧಕರಿಗೆ ಯಾವುದೇ ಕುರುಹು ದೊರೆತಿಲ್ಲ.

crater lake
crater lake
author img

By

Published : Apr 1, 2021, 2:52 PM IST

ನ್ಯೂಯಾರ್ಕ್: ಗ್ರಹದ ಆರಂಭಿಕ ಹವಾಮಾನದ ಬಗ್ಗೆ ಸುಳಿವು ಬಹಿರಂಗಪಡಿಸುವಂತಹ ಮಂಗಳನ ಮೇಲೆ ಅತಿ ಪುರಾತನ ಕುಳಿ ಸರೋವರವನ್ನು ಬಾಹ್ಯಾಕಾಶ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಪ್ಲಾನೆಟರಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ತಂಡ, ಅನೇಕ ಗೊಂದಲದ ಗುಣಲಕ್ಷಣಗಳು ಹೊಂದಿರುವ ಹೆಸರಿಸದ ಕುಳಿಗಳ ಬಗ್ಗೆ ವಿವರಣೆ ನೀಡಿದೆ.

ಈ ಕುಳಿಗಳ ನೆಲವು ಕೊಳಗಳ ಬಗ್ಗೆ ಸ್ಪಷ್ಟವಾದ ಭೌಗೋಳಿಕ ಪುರಾವೆಗಳನ್ನು ಹೊಂದಿವೆ. ಆದರೆ ಹೊರಗಿನಿಂದ ಕುಳಿಗಳಿಗೆ ನೀರು ಪ್ರವೇಶಿಸಬಹುದಾದ ಒಳಹರಿವಿನ ಕಾಲುವೆಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಕೆಳಗಿನಿಂದ ಚಿಮ್ಮಬಹುದಾದ ಅಂತರ್ಜಲ ಚಟುವಟಿಕೆಯ ಬಗ್ಗೆಯೂ ಯಾವುದೇ ಪುರಾವೆಗಳಿಲ್ಲ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ 66 ವರ್ಷದ ಆಂಟಿ, ಸ್ವಲ್ಪ ಸಂಯಮ ಪ್ರದರ್ಶಿಸಲಿ: ಬಿಜೆಪಿ ಮುಖಂಡನ ವ್ಯಂಗ್ಯ

ದೀರ್ಘಕಾಲ ಕಳೆದುಹೋದ ಮಂಗಳದ ಹಿಮನದಿಯ ಹರಿವಿನಿಂದ ಈ ವ್ಯವಸ್ಥೆ ಕಂಡಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಹಿಮನದಿಯ ಮೇಲಿರುವ ಕುಳಿಗಳಲ್ಲಿ ನೀರು ಹರಿದಿತ್ತು. ಇದರರ್ಥ ಅದು ಕಣಿವೆಯ ಹಿಂದೆ ಬಿಡದೆ ಅದು ನೇರವಾಗಿ ನೆಲದ ಮೇಲೆ ಹರಿಯುತ್ತಿತ್ತು. ನೀರು ಅಂತಿಮವಾಗಿ ತಗ್ಗು ಪ್ರದೇಶದ ಕುಳಿ ನೆಲಕ್ಕೆ ನುಗ್ಗಿ ಖಾಲಿಯಾಗಿದೆ. ಅಲ್ಲಿ ಅದು ಕೇವಲ ಮಂಗಳದ ಮಣ್ಣಿನಲ್ಲಿ ತನ್ನ ಭೌಗೋಳಿಕ ಚಿಹ್ನೆಯನ್ನು ಬಿಟ್ಟಿತು ಎಂದು ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.