ETV Bharat / international

ಅಫ್ಘನ್ನರೇ ಅವರ ದೇಶವನ್ನು ಕಟ್ಟಿಕೊಳ್ಳಬೇಕು, ಅದು ನಮ್ಮ ಜವಾಬ್ದಾರಿ ಅಲ್ಲ : ಜೋ ಬೈಡನ್ - ಆಫ್ಘನಿಸ್ತಾನದಿಂದ ಅಮೆರಿಕ ಸೇನೆ ವಾಪಸ್​

ಈಗಾಗಲೇ ಅಮೆರಿಕ ಸರ್ಕಾರದೊಂದಿಗೆ ಕೆಲಸ ಮಾಡಿದ ಅಫ್ಘನ್​ ಪ್ರಜೆಗಳಿಗೆ ಅಮೆರಿಕಕ್ಕೆ ಬರಲು ಸುಮಾರು ಎರಡೂವರೆ ಸಾವಿರ ವಿಶೇಷ ವಲಸೆಗಾರರ ವೀಸಾ ನೀಡಲಾಗಿದೆ ಎಂದು ಬೈಡನ್ ಹೇಳಿದ್ದಾರೆ ಎಂದು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ..

Afghans have to rebuild their nation on their own, not US responsibility: Biden
ಆಫ್ಘನ್ನರೇ ಅವರ ದೇಶವನ್ನು ಕಟ್ಟಿಕೊಳ್ಳಬೇಕು, ಅದು ನಮ್ಮ ಜವಾಬ್ದಾರಿ ಅಲ್ಲ: ಜೋ ಬೈಡನ್
author img

By

Published : Jul 10, 2021, 4:12 PM IST

ವಾಷಿಂಗ್ಟನ್, ಅಮೆರಿಕ : ಅಫ್ಘಾನಿಸ್ತಾನವನ್ನು ಪುನರ್‌ ನಿರ್ಮಿಸುವುದು ಅಮೆರಿಕದ ಜವಾಬ್ದಾರಿಯಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಗುರುವಾರ ಸ್ಪಷ್ಟನೆ ನೀಡಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಫ್ಘನ್ ನಾಯಕರನ್ನು ಒತ್ತಾಯಿಸಿದ್ದಾರೆ.

ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೈಡನ್, ಅಫ್ಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧದ ಹಿತಾಸಕ್ತಿಗಳನ್ನು ಹತ್ತಿಕ್ಕುವುದು ಮತ್ತು ಬಿನ್ ಲಾಡೆನ್ ಅಂತ್ಯ ಕಾಣಿಸುವುದು ಅಮೆರಿಕದ ಉದ್ದೇಶಗಳಾಗಿದ್ದು, ಅವುಗಳು ಈಡೇರಿವೆ. ಯುಎಸ್ ಮಿಲಿಟರಿ ಮಿಷನ್ ಆಗಸ್ಟ್ ಅಂತ್ಯದವರೆಗೆ ಮಾತ್ರ ಮುಂದುವರೆಯಲಿದೆ ಎಂದಿದ್ದಾರೆ.

ಈ ಕುರಿತು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದ್ದು, ಅಮೆರಿಕದ ಭದ್ರತಾ ತಂಡವು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಮಾಹಿತಿ ನೀಡಿದ ನಂತರ ಬೈಡನ್ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದಾರೆ.

ನಾವು ಮುಂದಿನ ದಿನಗಳಲ್ಲಿಯೂ ನಮ್ಮ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದಿಲ್ಲ. ಈಗಾಗಲೇ, ಶೇ.90ರಷ್ಟು ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆಯಲಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಎಲ್ಲಾ ಪಡೆಗಳು ವಾಪಸ್ಸಾಗಲಿವೆ. ನಂತರ ಇಡೀ ದೇಶವನ್ನು ಸಂಪೂರ್ಣವಾಗಿ ಅಫ್ಘನ್ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಬೈಡನ್ ಹೇಳಿದ್ದಾರೆ.

ಇದನ್ನೂ ಓದಿ: ಜುಲೈ 22ರಂದು ಪಾರ್ಲಿಮೆಂಟ್ ಮುಂಭಾಗ ರೈತರಿಂದ ಪ್ರತಿಭಟನೆ : ರಾಕೇಶ್ ಟಿಕಾಯತ್

ಈಗಾಗಲೇ ಅಮೆರಿಕ ಸರ್ಕಾರದೊಂದಿಗೆ ಕೆಲಸ ಮಾಡಿದ ಅಫ್ಘನ್​ ಪ್ರಜೆಗಳಿಗೆ ಅಮೆರಿಕಕ್ಕೆ ಬರಲು ಸುಮಾರು ಎರಡೂವರೆ ಸಾವಿರ ವಿಶೇಷ ವಲಸೆಗಾರರ ವೀಸಾ ನೀಡಲಾಗಿದೆ ಎಂದು ಬೈಡನ್ ಹೇಳಿದ್ದಾರೆ ಎಂದು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.