ನವದೆಹಲಿ: 2020ರ ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಭೂಮಿಯ ಮೇಲೆ ಸಣ್ಣ ಕ್ಷುದ್ರಗ್ರಹವು ಸಾಗಲಿದೆ. ಇದು ಭೂಮಿಗೆ ಅಪ್ಪಳಿಸುವ ಶೇಕಡಾ 0.41ರಷ್ಟು ಅವಕಾಶವನ್ನು ಹೊಂದಿದೆ ಎಂದು ನಾಸಾ ದತ್ತಾಂಶವು ಊಹಿಸಿದೆ.
2020ರ ಯುಎಸ್ ಚುನಾವಣೆಗೆ ಒಂದು ದಿನ ಮೊದಲು 0.002 ಕಿ.ಮೀ (ಸುಮಾರು 6.5 ಅಡಿ) ವ್ಯಾಸವನ್ನು ಹೊಂದಿರುವ "2018 ವಿಪಿ 1" ಎಂಬ ಕ್ಷುದ್ರಗ್ರಹವು ಭೂಮಿಯ ಬಳಿ ಹಾದುಹೋಗುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಮೊದಲು 2018ರಲ್ಲಿ ಕ್ಯಾಲಿಫೋರ್ನಿಯಾದ ಪಾಲೋಮರ್ ವೀಕ್ಷಣಾಲಯದಲ್ಲಿ ಈ ಕ್ಷುದ್ರ ಗ್ರಹದ ಚಲನ-ವಲನವನ್ನ ಗುರುತಿಸಲಾಗಿತ್ತು.
12.968 ದಿನಗಳ 21 ಅವಲೋಕನಗಳ ಆಧಾರದ ಮೇಲೆ, ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾವು ಕ್ಷುದ್ರಗ್ರಹವು ಆಳವಾದ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದೆ. ಕಳೆದ ವಾರಾಂತ್ಯದಲ್ಲಿ ಒಂದು ಸಣ್ಣ ಕಾರು ಗಾತ್ರದ ಕ್ಷುದ್ರಗ್ರಹವು ಭೂಮಿಯಿಂದ ಕೊಂಚ ದೂರದಲ್ಲಿ ಹಾರಿಹೋಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ಷುದ್ರಗ್ರಹವು ದಕ್ಷಿಣ ಹಿಂದೂ ಮಹಾಸಾಗರದ ಮೇಲೆ 2,950 ಕಿಲೋಮೀಟರ್ ದೂರದಲ್ಲಿ ಭಾನುವಾರ ಬೆಳಗ್ಗೆ 12.08 ಗಂಟೆಗೆ (ಭಾರತದ ಸಮಯ ರಾತ್ರಿ 9.38) ದಾಟಿದೆ ಎಂದು ನಾಸಾ ತಿಳಿಸಿದೆ.
ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳು ಅಥವಾ ಎನ್‌ಇಎಗಳು ಬಹುಪಾಲು ಹೆಚ್ಚಿನ ದೂರದಲ್ಲಿ ಸುರಕ್ಷಿತವಾಗಿ ಹಾದು ಹೋಗುತ್ತವೆ. ಸಾಮಾನ್ಯವಾಗಿ ಚಂದ್ರನಿಗಿಂತ ಹೆಚ್ಚು ದೂರದಲ್ಲೇ ಹಾದು ಹೋಗುತ್ತವೆ. ಕ್ಷುದ್ರಗ್ರಹವು ಭೂಮಿಯಿಂದ ದೂರ ಹೋಗುತ್ತಿರುವಾಗ ಆರು ಗಂಟೆಗಳ ನಂತರ ನಾಸಾ - ಅನುದಾನಿತ ಸೌಲಭ್ಯದಿಂದ ಈ ರೆಕಾರ್ಡ್ - ಸೆಟ್ಟಿಂಗ್ ಸ್ಪೇಸ್ ರಾಕ್ನ ಮೊದಲ ಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದೆ.
ಎಸ್‌ಯುವಿ ಗಾತ್ರದ ಕ್ಷುದ್ರಗ್ರಹವನ್ನು ಐಐಟಿ - ಬಾಂಬೆಯ ಇಬ್ಬರು ವಿದ್ಯಾರ್ಥಿಗಳಾದ ಕುನಾಲ್ ದೇಶ್ಮುಖ್ ಮತ್ತು ಕ್ರಿಟ್ಟಿ ಶರ್ಮಾ ಪತ್ತೆ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಪುಣೆ ಮತ್ತು ಹರಿಯಾಣ ಮೂಲದವರು.