ರಿಚ್ಮಂಡ್(ಅಮೆರಿಕ): ಉಕ್ರೇನ್ ಮೇಲೆ ಕಳೆದ 5 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾವು ವಿಶ್ವದ ಕೆಲವು ಅತ್ಯುತ್ತಮ ಹ್ಯಾಕರ್‌ಗಳನ್ನು ಹೊಂದಿದೆ. ಆದರೂ ಉಕ್ರೇನ್ ಮೇಲೆ ಸೈಬರ್ ದಾಳಿ ನಡೆಸಿಲ್ಲ. ಮಾಲ್‌ವೇರ್ ಮೂಲಕ ಅಪಾಯವನ್ನು ಸೃಷ್ಟಿಸುವ ಸಾಮರ್ಥ್ಯವು ಗಮನಾರ್ಹ ಪರಿಣಾಮವನ್ನು ಬೀರಲಿಲ್ಲ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಪರಮಾಣು ಪಡೆಗಳನ್ನು ಎಚ್ಚರಿಸಿದ ನಂತರ ಭಾರಿ ಅಪಾಯದ ಕ್ಷಣಗಳ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿರೂ ತಂತ್ರಜ್ಞಾನಕ್ಕೆ ಪೆಟ್ಟು ನೀಡುವಂತ ದಾಳಿಯಾಗಿಲ್ಲ. ಯಾಕೆಂದರೆ ಉಕ್ರೇನ್‌ನಲ್ಲಿ ಇಂಟರ್ನೆಟ್ ಹೆಚ್ಚಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇನ್ನೂ ಕೂಡ ಸ್ಮಾರ್ಟ್‌ಫೋನ್ ಮೂಲಕ ಜಾಗತಿಕ ಬೆಂಬಲವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರ ಜೊತೆಗೆ ಅಲ್ಲಿನ ವಿದ್ಯುತ್ ಸ್ಥಾವರಗಳು ಹಾಗೂ ಇತರ ನಿರ್ಣಾಯಕ ಮೂಲಸೌಕರ್ಯಗಳು ಕಾರ್ಯನಿರ್ವಹಿಸಲು ಸಮರ್ಥವಾಗಿವೆ.
ದೊಡ್ಡ ಪ್ರಮಾಣದ ರಷ್ಯಾದ ಸೇನಾ ಆಕ್ರಮಣದಲ್ಲಿ ವಿನಾಶಕಾರಿ ಸೈಬರ್ ದಾಳಿಗಳು ಸಂಭವಿಸಿಲ್ಲ. ಕೆಲ ಜನರು ಭಾವಿಸಿದಂತೆ ಇದು ದೊಡ್ಡ ಮಟ್ಟದಲ್ಲಿ ಭಯಪಡುವ ಮಟ್ಟಿಗೆ ಇದು ಖಂಡಿತವಾಗಿಯೂ ಉಕ್ರೇನ್‌ನ ಹೊರಗೆ ಕಂಡುಬಂದಿಲ್ಲ ಎಂದು ವೈಟ್‌ಹೌಸ್‌ನ ಸೈಬರ್ ಸೆಕ್ಯುರಿಟಿಯ ಮಾಜಿ ಸಂಯೋಜಕ ಮೈಕೆಲ್ ಡೇನಿಯಲ್ ಹೇಳಿದ್ದಾರೆ. ಸಹಜವಾಗಿ, ಈ ತಂತ್ರ ಮುಂದೆ ಬದಲಾಗಬಹುದು. ಆದರೆ, ರಷ್ಯಾ ಹೆಚ್ಚು ಶಕ್ತಿಶಾಲಿಯಾಗಿದ್ದರೂ ಸೈಬರ್ ದಾಳಿಯನ್ನು ಯಾಕೆ ಮಾಡಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಉಕ್ರೇನ್‌ನ ಕೈಗಾರಿಕಾ ನೆಲೆಯು ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಕಡಿಮೆ ಡಿಜಿಟಲೀಕರಣಗೊಂಡಿರುವ ಪರಿಣಾಮವು ಸಾಕಷ್ಟು ಗಂಭೀರವಾಗಿರುವುದಿಲ್ಲ ಎಂದು ರಷ್ಯಾ ನಿರ್ಧರಿಸಿರಬಹುದು. ಅಥವಾ ರಷ್ಯಾ ತನ್ನ ಗಡಿಯ ಹೊರಗೆ ಮೇಲಾಧಾರ ಪ್ರಭಾವದ ಅಪಾಯವಿಲ್ಲದೇ ಉಕ್ರೇನ್‌ಗೆ ಗಂಭೀರ ಹಾನಿಯನ್ನುಂಟುಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿರಬಹುದು ಎಂದು ಸೈಬರ್ ಭದ್ರತಾ ತಜ್ಞರು ಕ್ರೆಮ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಿಲ್ಲಿಸಲಿ: ವಿಶ್ವಸಂಸ್ಥೆಯ ತುರ್ತು ಸಾಮಾನ್ಯ ಸಭೆಯಲ್ಲಿ ಹತ್ತಾರು ದೇಶಗಳ ಒತ್ತಾಯ