ವಾಷಿಂಗ್ಟನ್: ಅಮೆರಿಕದಲ್ಲಿ 90 ಪ್ರತಿಶತ ವಯಸ್ಕರು ಏಪ್ರಿಲ್ 19 ರೊಳಗೆ ಕೋವಿಡ್-19 ವ್ಯಾಕ್ಸಿನೇಷನ್ಗೆ ಅರ್ಹರಾಗುತ್ತಾರೆ ಎಂದು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಬೈಡನ್ ಆಡಳಿತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಅಭೂತಪೂರ್ವ ವೇಗದಲ್ಲಿ ನಡೆಯುತ್ತಿದೆ. ಅವರ ಆಡಳಿತದ 60 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ 100 ಮಿಲಿಯನ್ ಶಾಟ್ಸ್ ಲಸಿಕೆ ನೀಡಲಾಗಿದೆ. ಈಗ ಕೇವಲ 40 ದಿನಗಳಲ್ಲಿ ಮುಂದಿನ 100 ಮಿಲಿಯನ್ ಶಾಟ್ಸ್ ನೀಡಲಾಗುವುದು.
ಬಹುಪಾಲು ವಯಸ್ಕರು, ಮೇ 1 ರವರೆಗೆ ಕಾಯಬೇಕಾಗಿಲ್ಲ. ಏಪ್ರಿಲ್ 19 ರಂದು ಲಸಿಕೆ ಪಡೆಯಲು ನೀವು ಅರ್ಹರಾಗಿರುತ್ತೀರಿ. ಅಂತಿಮವಾಗಿ, ಶೇಕಡಾ 10 ಜನರಿಗೆ ಮೇ 1ರೊಳಗೆ ಲಸಿಕೆ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಕೊರತೆ : ಬ್ರೆಜಿಲ್ ವಿದೇಶಾಂಗ ಸಚಿವ ರಾಜೀನಾಮೆ
ತಾವು ಅಧ್ಯಕ್ಷರಾದ ಕೇವಲ 10 ವಾರಗಳ ನಂತರ, 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 75 ಪ್ರತಿಶತದಷ್ಟು ಅಮೆರಿಕನ್ನರು ಕನಿಷ್ಠ ಒಂದು ವ್ಯಾಕ್ಸಿನೇಷನ್ ಶಾಟ್ ಪಡೆದಿದ್ದಾರೆ ಎಂದು ಬೈಡೆನ್ ಹೇಳಿದ್ದಾರೆ.