ETV Bharat / international

ರಿವೇಂಜ್​​​​​ ತೆಗೆದುಕೊಂಡಿತಾ ಇರಾನ್​...ಇರಾಕ್​​​ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಬರೋಬ್ಬರಿ 80 ಸೈನಿಕರು ಬಲಿ

author img

By

Published : Jan 8, 2020, 11:50 AM IST

ಇಂದು ಬೆಳಗ್ಗೆ ಇರಾನ್​ ರಾಕ್​ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದ್ದು, 80ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

missile attack
ಕ್ಷಿಪಣಿ ದಾಳಿ

ಟೆಹರಾನ್​​(ಇರಾನ್​​): ಅಮೆರಿಕ ವಿರುದ್ಧ ಸಿಡಿದೆದ್ದಿರುವ ಇರಾನ್​ 12ಕ್ಕೂ ಹೆಚ್ಚು ಕ್ಷಿಪಣಿಗಳನ್ನುಇರಾಕ್​ನಲ್ಲಿರುವ ಅಮೆರಿಕ ಸೇನೆಯ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್​​ ಮಾಧ್ಯಮಗಳ ಪ್ರಾಥಮಿಕ ವರದಿ ತಿಳಿಸಿದೆ.

ತನ್ನ ಸೇನಾ ನಾಯಕನನ್ನು ಕಳೆದುಕೊಂಡಿರುವ ಇರಾನ್​​, ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಇಂದು ಬೆಳಗ್ಗೆ 5.30ರ ಸುಮಾರಿಗೆ ಇರಾಕ್​ನಲ್ಲಿರುವ ಅಮೆರಿಕ ಸೇನೆಯ ಮೇಲೆ ದಾಳಿ ನಡೆಸಿದ್ದು, ಆ ಸಮಯದಲ್ಲಿ ಯಾವುದೇ ಸಾವು ನೋವುಗಳ ಸಂಭವಿಸಿಲ್ಲ ಎಂದು ವರದಿಯಾಗಿತ್ತಾದರೂ ನಂತರದಲ್ಲಿ 80ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ದಾಳಿ ಹಿನ್ನೆಲೆಯಲ್ಲೇ ಅಮೆರಿಕಾದಿಂದ ಇರಾನ್​ಗೆ ಸಂಚರಿಸುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿಲಾಗಿದ್ದು ಹಾಗೂ ಅಮೆರಿಕದಲ್ಲಿರುವ ಶ್ವೇತಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮತ್ತೊಂದೆಡೆ ಭಾರತ ಕೂಡಾ ಇರಾಕ್​ ಹಾಗೂ ಇರಾನ್​ ಮೇಲೆ ವಿಮಾನಗಳ ಹಾರಾಟ ನಡೆಸದಂತೆ ಭಾರತೀಯ ವಾಯುಯಾನ ಇಲಾಖೆ ಆದೇಶ ನೀಡಿದೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.