ETV Bharat / international

ಬಂದೂಕುಧಾರಿಗಳಿಂದ ಗುಂಡಿನ ದಾಳಿ: 8 ನಾಗರಿಕರಿಗೆ ಗಾಯ - SEPTA station shooting

71 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮೊದಲಿಗೆ ಹೊಟ್ಟೆಯ ಭಾಗಕ್ಕೆ ಗುಂಡು ತಗುಕಲಿದರೆ ಬಳಿಕ ಕಾಲಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಎಲ್ಲ ಗಾಯಾಳುಗಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

8 hurt in shooting near Philadelphia transit station
ಬಂದೂಕುದಾರಿಗಳಿಂದ ಗುಂಡಿನ ದಾಳಿ: 8 ನಾಗರಿಕರಿಗೆ ಗಾಯ
author img

By

Published : Feb 18, 2021, 3:29 PM IST

Updated : Feb 20, 2021, 12:55 PM IST

ಫಿಲಡೆಲ್ಫಿಯಾ (ಪೆನ್ಸಿಲ್ವೇನಿಯಾ): ಇಲ್ಲಿನ ಉತ್ತರ ಫಿಲಡೆಲ್ಫಿಯಾ ಭಾಗದ ಸಾರಿಗೆ ನಿಲ್ದಾಣ ಕೇಂದ್ರದಲ್ಲಿ ನಡೆದ ಬಂದೂಕುಧಾರಿಗಳ ಗುಂಡಿನ ದಾಳಿಗೆ ಸುಮಾರು 8 ಮಂದಿ ನಾಗರಿಕರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

71 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮೊದಲಿಗೆ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದರೆ ಬಳಿಕ ಕಾಲಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಎಲ್ಲ ಗಾಯಾಳುಗಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಆತನಿಂದ ಎರಡು ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನ ಕುರಿತು ಮಾಹಿತಿ ಹಂಚಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಗುಂಡಿನ ದಾಳಿಗೆ ಕಾರನ್ನು ಬಳಸಲಾಗಿರುವುದು ಕಂಡು ಬಂದಿದೆ, ಅಂದರೆ ಈತನ ಜೊತೆ ಇನ್ನಷ್ಟು ಮಂದಿ ಕೈಜೋಡಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಭಾರೀ ಮಳೆಯಿಂದ ಇಂಡೋನೇಷ್ಯಾದಲ್ಲಿ ಭೂಕುಸಿತ : ಇಬ್ಬರು ಸಾವು, 16 ಮಂದಿ ನಾಪತ್ತೆ

Last Updated : Feb 20, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.