ಅಲಾಸ್ಕಾ( ಅಮೆರಿಕ) : ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಅಲಾಸ್ಕಾದಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆ ದಾಖಲಾಗಿದ್ದು, ಆ ಪ್ರದೇಶದಲ್ಲಿ ಸುನಾಮಿ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಕರಾವಳಿ ತೀರದ ನಿವಾಸಿಗಳಿಗೆ ಜಾಗೃತೆಯಿಂದಿರಲು ಸೂಚಿಸಲಾಗಿದೆ.
-
VIDEO UPDATE: NO tsunami threat to Washington/Oregon/BC coastlines from 7.8 Alaska earthquake. pic.twitter.com/kgGVX8DwkT
— Morgan Palmer (@MorganKIRO7) July 22, 2020 " class="align-text-top noRightClick twitterSection" data="
">VIDEO UPDATE: NO tsunami threat to Washington/Oregon/BC coastlines from 7.8 Alaska earthquake. pic.twitter.com/kgGVX8DwkT
— Morgan Palmer (@MorganKIRO7) July 22, 2020VIDEO UPDATE: NO tsunami threat to Washington/Oregon/BC coastlines from 7.8 Alaska earthquake. pic.twitter.com/kgGVX8DwkT
— Morgan Palmer (@MorganKIRO7) July 22, 2020
ಅಲಾಸ್ಕಾದ ಚಿಗ್ನಿಕ್ ಪ್ರದೇಶದಿಂದ 75 ಮೈಲಿ ದೂರದಲ್ಲಿ ಹಾಗೂ 8 ಮೈಲಿ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಾಗರದಂಚಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ಹವಾಮಾನ ಆಡಳಿತ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿರುವುದರಿಂದ ಅಲಾಸ್ಕಾ ಪೆನಿನ್ಸುಲಾ ಮತ್ತು ದಕ್ಷಿಣ ಅಲಾಸ್ಕಾದಲ್ಲಿ ಅಪಾಯಕಾರಿ ಸುನಾಮಿಗೆ ಈ ಭೂಕಂಪನ ಎಡೆ ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.
ಸುನಾಮಿ ಎಚ್ಚರಿಕೆಯ ನಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಅಲಾಸ್ಕಾ ಮಾತ್ರವಲ್ಲದೇ, ಅಮೆರಿಕದ ಇತರ ಕರಾವಳಿ ಪ್ರದೇಶ ಹಾಗೂ ಕೆನಡಾದ ಕರಾವಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.