ETV Bharat / international

ವಿಮಾನ ಅಪಘಾತ: 7 ಮಂದಿ ಸಾವು - Sao Paulo state

ಬ್ರೆಜಿಲ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

plane crash
plane crash
author img

By

Published : Sep 15, 2021, 10:49 AM IST

ಸಾವ್ ಪಾಲೊ( ಬ್ರೆಜಿಲ್​) : ಆಗ್ನೇಯ ಸಾವೊ ಪಾಲೊದ ಪಿರಾಸಿಕಾಬಾ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದಾರೆ.

ಪೈಲಟ್, ಸಹ - ಪೈಲಟ್ ಮತ್ತು ಐವರು ಪ್ರಯಾಣಿಕರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾವೊ ಪಾಲೊ ರಾಜ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದೆ.

ಸಾವೊ ಪಾಲೊ ನಗರದಿಂದ 164 ಕಿಮೀ ದೂರದಲ್ಲಿರುವ ಪಿರಾಸಿಕಾಬಾ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಈ ವಿಮಾನ ಹೊರಟಿತ್ತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಡಬಲ್​ ಇಂಜಿನ್ ಜೆಟ್ ವಿಮಾನ ಅಪಘಾತ.. ಆರು ಮಂದಿ ದುರ್ಮರಣ!

ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಾವೊ ಪಾಲೊ ರಾಜ್ಯ ತಂತ್ರಜ್ಞಾನ ವಿಭಾಗದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಜೊತೆಗೆ ಬ್ರೆಜಿಲಿಯನ್ ವಾಯುಪಡೆ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.