ಮೆಕ್ಸಿಕೋ ಸಿಟಿ: ಪಶ್ಚಿಮ ಮೆಕ್ಸಿಕೋದ ಆವಕಾಡೊ ಬೆಳೆಯುವ ವಲಯದಲ್ಲಿ ಗುರುವಾರ ಗ್ಯಾಂಗ್‌ಗಳ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಐವರು ಶಂಕಿತ ಡ್ರಗ್ ಕಾರ್ಟೆಲ್ ಬಂದೂಕುಧಾರಿಗಳು ಮೃತಪಟ್ಟಿದ್ದಾರೆ. ನ್ಯೂವೋ ಪರಂಗಾರಿಕುಟಿರೊ ಪಟ್ಟಣದಲ್ಲಿ ಐದು ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಮತ್ತು 32 ಶಂಕಿತರನ್ನು ಬಂಧಿಸಿರುವುದಾಗಿ ಇಲ್ಲಿನ ಮೈಕೋಕಾನ್ ರಾಜ್ಯದ ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಗ್ಯಾಂಗ್ವಾರ್ ನಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗ್ತಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಪರಂಗಾರಿಕುಟಿರೊದಲ್ಲಿ ಮಷಿನ್ ಗನ್‌ನಿಂದ ಗುಂಡು ಹಾರಿಸುವುದರೊಂದಿಗೆ ಸ್ವದೇಶಿ ನಿರ್ಮಿತ ಶಸ್ತ್ರಸಜ್ಜಿತ ಟ್ರಕ್ ಕಾಣಿಸಿದೆ.
ಓದಿ: ವಿಧಾನಸಭೆ ಚುನಾವಣೆಯ ಗೆಲುವು: ಆಪ್ಗೆ ರಾಜ್ಯಸಭೆಯ ಐದು ಸ್ಥಾನ ಬೋನಸ್!
ವಿಡಿಯೋ ನೋಡಿ ಗಮನ ಹರಿಸಿದ ಸರ್ಕಾರ ಹಿಂಸಾಚಾರವನ್ನು ಹತ್ತಿಕ್ಕಲು ಡಜನ್‌ಗಟ್ಟಲೆ ಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಪುರೆಪೆಚಾ ಸ್ಥಳೀಯ ಪಟ್ಟಣಕ್ಕೆ ಕಳುಹಿಸಿತು. ಬಂದೂಕುಧಾರಿಗಳು ಹತ್ತಿರದ ಪಟ್ಟಣದ ಮೇಯರ್ ಕೊಂದಿದ್ದರು. ಇದು ಯುನೈಟೆಡ್ ಕಾರ್ಟೆಲ್ಸ್ ಎಂದು ಕರೆಯಲ್ಪಡುವ ವಯಾಗ್ರಾಸ್ ಮತ್ತು ಜಲಿಸ್ಕೋ ಕಾರ್ಟೆಲ್ ನಡುವಿನ ಸುದೀರ್ಘವಾದ ಯುದ್ಧದ ದೃಶ್ಯವಾಗಿದೆ.
ಪುರೆಪೆಚಾ ಪಟ್ಟಣದಲ್ಲಿ ಬಹಳ ಹಿಂದಿನಿಂದಲೂ ವಯಾಗ್ರಾಸ್ ಗ್ಯಾಂಗ್, ಆತ್ಮರಕ್ಷಣೆ ಗಸ್ತು ಮತ್ತು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವೆ ವಿವಾದಗಳು ನಡೆಯುತ್ತಲೇ ಇರುತ್ತವೆ. ಕ್ರಿಮಿನಲ್ ಗುಂಪುಗಳು ಆವಕಾಡೊ ಬೆಳೆಗಾರರಿಂದ ದೀರ್ಘಕಾಲದಿಂದ ರಕ್ಷಣೆ ಪಾವತಿಗಳನ್ನು ಸುಲಿಗೆ ಮಾಡುತ್ತಿದೆ.
ಓದಿ: ಪಕ್ಷದ ತತ್ವ ಸಿದ್ಧಾಂತಗಳೇ ಅದ್ಭುತ ವಿಜಯಕ್ಕೆ ಕಾರಣ: ಪ್ರಧಾನಿ ಮೋದಿ
1940 ರ ದಶಕದಲ್ಲಿ ಪ್ಯಾರಾಕುಟಿನ್ ಜ್ವಾಲಾಮುಖಿಯ ಸ್ಫೋಟದಿಂದ ಹಳೆಯ ಗ್ರಾಮವಾದ ಪರಂಗಾರಿಕುಟಿರೋ ಭಾಗಶಃ ಸಮಾಧಿಯಾದ ನಂತರ ಈ ಪಟ್ಟಣವನ್ನು ನಿರ್ಮಿಸಲಾಯಿತು.
ಹತ್ತಿರದ ಪಟ್ಟಣವಾದ ಅಗುಲಿಲ್ಲಾದಲ್ಲಿ ಬಂದೂಕುಧಾರಿಗಳು ಮೇಯರ್ ಸಿಸಾರ್ ಆರ್ಟುರೊ ವೇಲೆನ್ಸಿಯಾ ಅವರನ್ನು ಕೊಂದರು. ಜಲಿಸ್ಕೋ ಬಂದೂಕುಧಾರಿಗಳನ್ನು ಹೊರಹಾಕಲು ಸರ್ಕಾರವು ಪಟ್ಟಣಕ್ಕೆ ಸೈನ್ಯವನ್ನು ಕಳುಹಿಸುವವರೆಗೆ ಒಂದು ತಿಂಗಳ ಹಿಂದೆ ವಯಾಗ್ರಾಸ್ ಮತ್ತು ಜಲಿಸ್ಕೋ ಕಾರ್ಟೆಲ್ ನಡುವಿನ ಯುದ್ಧಕ್ಕೆ ಅಗುಲಿಲ್ಲಾ ಕೇಂದ್ರಬಿಂದುವಾಗಿತ್ತು.
ಮಿಚೋವಕ್ಯಾನ್ ಗವರ್ನರ್ ಆಲ್ಫ್ರೆಡೊ ರಾಮ್ರೆಜ್ ಬೆಡೊಲ್ಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾವು ಹತ್ಯೆಯನ್ನು ಶಕ್ತಿಯುತವಾಗಿ ಖಂಡಿಸುತ್ತೇವೆ ಮತ್ತು ಕೊಲೆಗಾರರನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದ್ದಾರೆ.