ಟೆಕ್ಸಾಸ್: ಪಾಕ್ನ ನರ ವಿಜ್ಞಾನಿಯ ಬಿಡುಗಡೆಗೆ ಒತ್ತಾಯಿಸಿ ಇಲ್ಲಿನ ಕಾಲಿವಿಲ್ಲೆಯಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ ನಾಲ್ವರನ್ನು ದುಷ್ಕರ್ಮಿಗಳು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ನ ಓರ್ವ ಧರ್ಮಗುರು ಸೇರಿದಂತೆ ನಾಲ್ವರನ್ನು ದುಷ್ಕರ್ಮಿಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಮೊದಲು ಓರ್ವನನ್ನು ಬಿಡುಗಡೆಗೊಳಿಸಿದ್ದರು. ಇದೀಗ ಉಳಿದ ಮೂವರನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಟೆಕ್ಸಾಸ್ ಗವರ್ನರ್ ಟ್ವೀಟ್ ಮಾಡಿದ್ದಾರೆ.
ಬಿಡುಗಡೆಯಾದವರಿಗೆ ಯಾವುದೇ ಗಾಯಗಳಾಗಿಲ್ಲ. ಸದ್ಯದಲ್ಲೇ ತಮ್ಮ ಕುಟುಂಬಸ್ಥರನ್ನು ಸೇರಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Prayers answered.
— Greg Abbott (@GregAbbott_TX) January 16, 2022 " class="align-text-top noRightClick twitterSection" data="
All hostages are out alive and safe.
">Prayers answered.
— Greg Abbott (@GregAbbott_TX) January 16, 2022
All hostages are out alive and safe.Prayers answered.
— Greg Abbott (@GregAbbott_TX) January 16, 2022
All hostages are out alive and safe.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಧಿಕಾರಿಗಳನ್ನು ಹತ್ಯೆಗೈಯ್ಯಲು ಯತ್ನಿಸಿದ ಪ್ರಕರಣದಡಿ ದೋಷಿಯಾಗಿರುವ ಪಾಕಿಸ್ತಾನ ನರ ವಿಜ್ಞಾನಿಯ ಬಿಡುಗಡೆಗೆ ದುಷ್ಕರ್ಮಿಗಳು ಒತ್ತಾಯಿಸಿದ್ದರು. 160 ವರ್ಷಗಳ ಹಳೆಯ ಕಾಂಗ್ರೆಗೇಶನ್ ಬೆತ್ ಇಸ್ರೇಲ್ ಕಟ್ಟಡದಲ್ಲಿ ಈ ಕೃತ್ಯ ನಡೆದಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ವೈಟ್‌ಹೌಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಲಿಸುತ್ತಿದ್ದ ಬಸ್ ಡ್ರೈವರ್‌ಗೆ ಫಿಟ್ಸ್... ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್..!