ETV Bharat / international

ಅಮೆರಿಕದ ಕೆರೊಲಿನಾದಲ್ಲಿ ಗುಂಡಿನ ದಾಳಿಗೆ ಮೂವರು ಬಲಿ - South Carolina

ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ನಡೆದ ಶೂಟೌಟ್​ನಲ್ಲಿ ಮೂವರು ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ.

ಶೂಟೌಟ್
shooting
author img

By

Published : Aug 3, 2021, 8:11 AM IST

ಗ್ರೀನ್​ವುಡ್​ (ಅಮೆರಿಕ): ದಕ್ಷಿಣ ಕೆರೊಲಿನಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶೂಟೌಟ್ ನಡೆದಿದೆ.

ಗ್ರೀನ್‌ವುಡ್‌ನಿಂದ ದಕ್ಷಿಣಕ್ಕೆ 8 ಮೈಲಿ (13 ಕಿಲೋಮೀಟರ್) ದೂರದಲ್ಲಿರುವ ಅಮೆರಿಕ ಹೆದ್ದಾರಿ ಗ್ರೀನ್​ವುಡ್​​ ಕೌಂಟಿಯ ಶೆರಿಫ್​ ಎಂಬುವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಪರಿಣಾಮ, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

ಶೆರಿಫ್ ಕಚೇರಿಯ ಮೇಜರ್ ಕೋಡಿ ಬಿಷಪ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಶ್ವಾನಪಡೆ ಸಹಾಯದಿಂದ ಶೋಧಕಾರ್ಯ ನಡೆಸಿದ್ದಾರೆ. ಪೊಲೀಸರು, ತನಿಖೆಗಾಗಿ ರಾಜ್ಯ ಕಾನೂನು ವಿಭಾಗದ ಸಹಾಯ ಪಡೆದಿದ್ದಾರೆ.

ಓದಿ: ಯುವಕರ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.