ETV Bharat / international

Texas Firing: ಅಮೆರಿಕದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, ಮೂವರು ಸಾವು - ಗಾರ್ಲ್ಯಾಂಡ್ ಪೊಲೀಸ್ ಸ್ಟೇಷನ್

ವ್ಯಕ್ತಿಯೊಬ್ಬ ಬಿಳಿ ಬಣ್ಣದ ಪಿಕಪ್ ಟ್ರಕ್‌ನಿಂದ ಹೊರಬಂದು, ದಿನಸಿ ಅಂಗಡಿಯೊಳಗೆ ಹೋಗಿ ಗುಂಡು ಹಾರಿಸಿ, ಮೂವರನ್ನು ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

3 dead, 1 hurt in shooting at Texas gas station
Texas Firing: ಅಮೆರಿಕದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, ಮೂವರು ಸಾವು
author img

By

Published : Dec 28, 2021, 5:30 AM IST

Updated : Dec 28, 2021, 7:02 AM IST

ಟೆಕ್ಸಾಸ್​, ಅಮೆರಿಕ: ಗ್ಯಾಸ್ ಸ್ಟೇಷನ್​ ಬಳಿ ಇದ್ದ ಅಂಗಡಿಯೊಳಗೆ ವ್ಯಕ್ತಿಯೋರ್ವ ನುಗ್ಗಿ ಏಕಾಏಕಿ ಗುಂಡುಹಾರಿಸಿದ ಕಾರಣದಿಂದ ಮೂವರು ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಲ್ಲಾಸ್​ನಲ್ಲಿ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ ಎಂದು ಗಾರ್ಲ್ಯಾಂಡ್​​ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿಯೊಬ್ಬ ಬಿಳಿ ಬಣ್ಣದ ಪಿಕಪ್ ಟ್ರಕ್‌ನಿಂದ ಹೊರಬಂದು, ದಿನಸಿ ಅಂಗಡಿಯೊಳಗೆ ಹೋಗಿ ಗುಂಡು ಹಾರಿಸಿದ್ದಾನೆ.

ನಾಲ್ವರ ಮೇಲೆ ಆತ ಗುಂಡು ಹಾರಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಮೃತಪಟ್ಟವರು ಮತ್ತು ಗಾಯಾಳುಗಳ ಹೆಸರನ್ನು ಪೊಲೀಸರು ಇನ್ನೂ ಬಿಡುಗಡೆ ಮಾಡಿಲ್ಲ.

ಗುಂಡು ಹಾರಿಸಿದ ನಂತರ ಆರೋಪಿ, ಬಂದಿದ್ದ ಟ್ರಕ್​ ಅನ್ನೇ ಹತ್ತಿಗೆ ಪರಾರಿಯಾಗಿದ್ದಾನೆ. ಆ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿ ಬೇಸ್​ಬಾಲ್ ಟೋಪಿ, ನೀಲಿ ಬಣ್ಣದ ಸರ್ಜಿಕಲ್ ಮಾಸ್ಕ್​, ಗಾಢ ಬಣ್ಣದ ಅಥ್ಲೆಟಿಕ್ಸ್​ ಶಾರ್ಟ್ಸ್​​​ ಧರಿಸಿದ್ದನು, ಆದರೆ ಶರ್ಟ್​ ಧರಿಸಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Brazil Floods : ಬ್ರೆಜಿಲ್ ಪ್ರವಾಹಕ್ಕೆ 18 ಮಂದಿ ಬಲಿ.. ಸಾವಿರಾರು ಜನರ ಸ್ಥಳಾಂತರ..

Last Updated : Dec 28, 2021, 7:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.